ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡಿದೆ.
ಗೌರಿ ಹತ್ಯೆಗೂ ಮೊದಲು ಆರೋಪಿಗಳು 7 ದಿನಗಳಿಂದ ನಗರದಲ್ಲಿ ಇದ್ದುಕೊಂಡು, ಗೌರಿಯ ಚಲನವಲನಗಳನ್ನು ಗಮನಿಸಿ ಹತ್ಯೆ ಮಾಡಿರುವ ಸಾಧ್ಯತೆಯಿದೆ. ಎಲ್ಲಾ ರೀತಿಯಲ್ಲೂ ತನಿಖೆ ನಡೆಸಿದ್ದು, ಪ್ರಕರಣ ಸಂಬಂಧ 250 ಮಂದಿಯ ವಿಚಾರಣೆ ನಡೆದಿದೆ. ಸ್ಥಳೀಯರ ನೆರವು ಮತ್ತು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಶಂಕಿತ ಆರೋಪಿಗಳ ರೇಖಾ ಚಿತ್ರ ಬಿಡುಗಡೆ ಮಾಡಿರುವುದಾಗಿ ಎಸ್ಐಟಿ ತಂಡ ಹೇಳಿದೆ.
ಸೆ.5 ರಂದು ಮನೆಗೆ ವಾಪಸ್ ಆಗುವ ವೇಳೆಯಲ್ಲಿ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿ ಪರಾರಿಯಾಗಿದ್ದರು.