ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸುತ್ತ ಸಿನಿಮಾ ಮಾಡುವ ನಿರ್ಮಾಪಕರು ಅನುಮತಿಗಾಗಿ ಗೌರಿ ಕುಟುಂಬದ ಕಡೆಗೆ ಸುಳಿಯುವುದೇ ಬೇಕಾಗಿಲ್ಲ. ಯಾರಿಗೂ ಅನುಮತಿ ನೀಡಲ್ಲ ಎಂದು ಗೌರಿ ತಾಯಿ ಇಂದಿರಾ ಲಂಕೇಶ್ ಸ್ಪಷ್ಟವಾಗಿ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಈ ಪ್ರಕರಣದ ಬಗ್ಗೆ ಹಲವು ನಿರ್ಮಾಪಕರು ಸಿನಿಮಾ ಮಾಡಲು ಅನುಮತಿ ಕೇಳಿ ಬರುತ್ತಿದ್ದಾರೆ. ಆದರೆ ವಿಚಾರಣೆ ಹಂತದಲ್ಲಿರುವುದರಿಂದ ಅಡ್ಡಿಯಾಗುತ್ತದೆಂದು ಯಾರಿಗೂ ಸಿನಿಮಾ ಮಾಡಲು ಅವಕಾಶ ಕೊಡಲ್ಲ ಎಂದು ಇಂದಿರಾ ಲಂಕೇಶ್ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಇನ್ನೂ ಹಂತಕರು ಪತ್ತೆಯಾಗಿಲ್ಲ. ಹಾಗಿದ್ದರೂ ಎಸ್ಐಟಿ ತನಿಖೆ ಮೇಲೆ ತಮಗೆ ನಂಬಿಕೆಯಿದೆ. ಅವರು ನಿಷ್ಠುರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೌರಿ ಲಂಕೇಶ್ ಕುಟುಂಬ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ