Publish Date: Wed, 17 Nov 2021 (18:59 IST)
Updated Date: Wed, 17 Nov 2021 (19:03 IST)
ಬೆಂಗಳೂರು ಆನೇಕಲ್ ನಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ವಸುಂಧರಾ ಲೇಔಟ್ ನ ವಿ ಮ್ಯಾಕ್ಸ್ ಚಾಲೇಟ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆ ಎರಡು ಫ್ಲ್ಯಾಟ್ ಗಳಿಗೆ ಆವರಿಸಿದೆ ಎನ್ನಲಾಗಿದೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಹೊರಗೆ ಓಡಿ ಬಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
geetha
Publish Date: Wed, 17 Nov 2021 (18:59 IST)
Updated Date: Wed, 17 Nov 2021 (19:03 IST)