Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

BMRCL ವಿರುದ್ಧ ಕುಟುಂಬಸ್ಥರ ಆಕ್ರೋಶ

BMRCL ವಿರುದ್ಧ ಕುಟುಂಬಸ್ಥರ ಆಕ್ರೋಶ
bangalore , ಗುರುವಾರ, 9 ಫೆಬ್ರವರಿ 2023 (16:41 IST)
ಮೆಟ್ರೋ ಪಿಲ್ಲರ್ ಕುಸಿದು ತಾಯಿ‌, ಮಗು ಸಾವನ್ನಪ್ಪಿದ ದುರಂತ ನಡೆದು ತಿಂಗಳು ಕಳೆಯುತ್ತಾ ಬಂದ್ರೂ BMRCL ಕ್ರಮಕೈಗೊಳ್ಳದೆ ಕಳ್ಳಾಟವಾಡುತ್ತಿದೆ. ಘಟನೆ ನಡೆದು ತಿಂಗಳು ಕಳೆದ್ರೂ ಕಂಟ್ರ್ಯಾಕ್ಟರ್ ಮೇಲೆ BMRCL ಇನ್ನೂ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ. BMRCLನ ಈ ನಿರ್ಲಕ್ಷ್ಯದ ವಿರುದ್ಧ ನೊಂದ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸಾವನ್ನಪ್ಪಿದ ಮಗು ಮತ್ತು ತಾಯಿ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿತ್ತು. ಪರಿಹಾರ ಘೋಷಿಸಿ ಇಷ್ಟು ದಿನ ಕಳೆದರೂ ಕುಟುಂಬಸ್ಥರಿಗೆ ಸರ್ಕಾರದ ಪರಿಹಾರ ಹಣ ಕೈ ಸೇರಿಲ್ಲ. ದುರಂತ ಸಂಭವಿಸಿದ ದಿನ ಸಿಎಂ 
ಬಸವರಾಜ ಬೊಮ್ಮಾಯಿಯವರು 10 ಲಕ್ಷ ರೂ ಹಾಗೂ ನಮ್ಮ ಮೆಟ್ರೋ ಸಂಸ್ಥೆ 20 ಲಕ್ಷ ಪರಿಹಾರ ಘೋಷಿಸಿದ್ದರು. ಆದರೆ ಕುಟುಂಬಸ್ಥರು BMRCLನ ಪರಿಹಾರವನ್ನ ತಿರಸ್ಕರಿಸಿದ್ದಾರೆ. ಪರಿಹಾರ ತಿರಸ್ಕರಿಸಿರುವ ಕುಟುಂಬಸ್ಥರು ಮೊದಲು ಕಂಟ್ರ್ಯಾಕ್ಟರ್ ಲೈಸೆನ್ಸ್ ರದ್ದು‌ ಮಾಡುವಂತೆ ಆಗ್ರಹಿಸಿದ್ದಾರೆ. BMRCL ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದೆ. ನಮಗೆ ಪರಿಹಾರ ಬೇಕಾಗಿಲ್ಲ ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BMRCL ನೌಕರರ ಸಂಘದಿಂದ ಸಿಎಂಗೆ ಪತ್ರ