Publish Date: Mon, 25 Sep 2017 (12:28 IST)
Updated Date: Mon, 25 Sep 2017 (13:27 IST)
ಸಚಿವ ಡಿ.ಕೆ. ಶಿವಕುಮಾರ್ ಶರನ್ನವರಾತ್ರಿ ಪ್ರಯುಕ್ತ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಡಿ.ಕೆ. ಶಿಮಕುಮಾರ್ ಚಾಮುಂಡಿ ತಾಯಿಗೆ ಎರಡು ಬೆಳ್ಳಿ ಆನೆಗಳನ್ನ ಸಮರ್ಪಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಈ ಹಿಂದೆಯೂ ಹಲವು ಬಾರಿ ಚಾಮುಂಡಿ ತಾಯಿಗೆ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಬೆಳ್ಳಿ ಆನೆಗಳನ್ನ ಸಮರ್ಪಿಸಿದ್ದೇನೆ. ನಮ್ಮ ಕುಟುಂಬ ಮತ್ತು ರಾಜ್ಯದ ಜನತೆಗೆ ಒಳಿತಾಗಲೆಂದು ಹರಕೆ ಸಲ್ಲಿಸಿದ್ದೇನೆ. ಮನಸ್ಸಿನಲ್ಲಿ ಪ್ರಾರ್ಥಿಸಿ ದೇವಿ ಬಳಿ ಬೇಡಿಕೆಗಳನ್ನ ಇಟ್ಟಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಮ್ಮ ಮನೆ ಮೇಲಿನ ಐಟಿ ದಾಳಿ ಬಳಿಕ ಸಚಿವ ಡಿ.ಕೆ. ಶಿವಕುಮಾರ್ ದೇಗುಲಗಳ ಭೇಟಿ ಸಾಮಾನ್ಯವಾಗಿದೆ. ಐಟಿ ದಾಳಿ ಮುಗಿದ ಬಳಿಕವೇ ಅಜ್ಜಯ್ಯನನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇತ್ತೀಚೆಗೆ ಕಬ್ಬಾಳಮ್ಮ ದೇಗುಲಕ್ಕೂ ಡಿಕೆಶಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ