Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಡಿಯಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ತಡೆದ ಬಿಎಸ್ಎಫ್ ಯೋಧರು

ಗಡಿಯಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ತಡೆದ ಬಿಎಸ್ಎಫ್ ಯೋಧರು
ನವದೆಹಲಿ , ಸೋಮವಾರ, 25 ಸೆಪ್ಟಂಬರ್ 2017 (09:42 IST)
ನವದೆಹಲಿ: ಭಾರತಕ್ಕೆ ವಲಸೆ ಬರುತ್ತಿರುವ ರೋಹಿಂಗ್ಯಾ ಮುಸ್ಲಿಮರನ್ನು ತಡೆಯಲು ಬಿಎಸ್ಎಫ್ ಯೋಧರು ಬಹು ಸೂಕ್ಷ್ಮ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದೆ.


22 ಬಹುಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳೀಯರ ಸಹಾಯದೊಂದಿಗೆ ಬಿಎಸ್ಎಫ್ ಯೋಧರು ರೊಹಿಂಗ್ಯಾ ಮುಸ್ಲಿಮರು ಭಾರತದ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ.

ಮಿಲಿಟರಿ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಮ್ಯಾನ್ಮಾರ್ ನಿಂದ ರೊಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ರೊಹಿಂಗ್ಯಾ ಮುಸ್ಲಿಮರು ಮುಂದೊಂದು ದಿನ ದೇಶದ ಭದ್ರತೆಗೆ ಅಪಾಯ ತಂದೊಡ್ಡಬಹುದು. ಹಾಗಾಗಿ ಭಾರತದಲ್ಲಿ ನೆಲೆಸಲು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ಮೇಲಿನ ಮುನಿಸಿಗೆ ಹೊಸ ಪಕ್ಷ ಸ್ಥಾಪಿಸ್ತಾರಾ ಮುಲಾಯಂ ಸಿಂಗ್ ಯಾದವ್?