Publish Date: Mon, 25 Sep 2017 (08:20 IST)
Updated Date: Mon, 25 Sep 2017 (08:59 IST)
ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೈಟ್ ಕ್ಲಬ್ ಒಂದರಲ್ಲಿ ಪೋರ್ನ್ ನಟಿಯ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದರೆಂದು ವರದಿಯಾಗಿತ್ತು. ಆದರೆ ಇದನ್ನು ಅವರು ನಿರಾಕರಿಸಿದ್ದಾರೆ.
ನಾನು ನಟಿಯ ಮೇಲೆ ಹಲ್ಲೆ ನಡೆಸಿಲ್ಲ ಎಂದು ಶೇನ್ ಸ್ಪಷ್ಟನೆ ನೀಡಿದ್ದಾರೆ. ಭಾನುವಾರ ಲಂಡನ್ ನ ನೈಟ್ ಕ್ಲಬ್ ಒಂದಕ್ಕೆ ಬಂದಿದ್ದ ವಾರ್ನ್ ಅಲ್ಲಿ ವ್ಯಾಲೆರಿ ಫಾಕ್ಸ್ ಎಂಬ ಪೋರ್ನ್ ನಟಿಯೊಂದಿಗೆ ಜಗಳವಾಡಿದ್ದಲ್ಲದೆ, ಹಲ್ಲೆ ನಡೆಸಿದ್ದರು ಎಂದು ವರದಿಯಾಗಿತ್ತು.
ಈ ಬಗ್ಗೆ ನಟಿ ಲಂಡನ್ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ವಾರ್ನ್ ತಮ್ಮ ಟ್ವಿಟರ್ ಪೇಜ್ ಮೂಲಕ ತಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ನೈಟ್ ಕ್ಲಬ್ ನ ಸಿಸಿಟಿವಿ ವರದಿ ಆಧರಿಸಿ ಪೊಲೀಸರು ನಾನು ನಿರಪರಾಧಿ ಎಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಶೇನ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ