Publish Date: Thu, 02 Jul 2020 (16:23 IST)
Updated Date: Thu, 02 Jul 2020 (16:25 IST)
ಕೊರೊನಾ ವೈರಸ್ ನಿಂದಾದ ಲಾಕ್ ಡೌನ್ ಹಿನ್ನಲೆ ಪದೇ ಪದೇ ಮುಂದೂಡಿಕೆಯಾಗಿದ್ದ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಕೊನೆಗೂ ನೆರವೇರಿದೆ.
ಕೆಪಿಸಿಸಿ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಪ್ರತಿಜ್ಞಾ ದಿನ ನಡೆಯಿತು.
ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬೂತ್ ಮಟ್ಟದಿಂದ ಪಕ್ಷ ಕಟ್ಟೋಣ. ಸಾಮೂಹಿಕ ನಾಯಕತ್ವದಲ್ಲಿ ಮುಂದುವರೆಯೋಣ ಎಂದು ಕರೆ ನೀಡಿದರು.
ನಮಗೆ ಕಾಂಗ್ರೆಸ್ ಧರ್ಮ ಅದುವೇ ಜಾತಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.