ಬೆಂಗಳೂರು : ಜನರಿಗೆ ಕೆಲಸದ ಆಮಿಷವೊಡ್ಡಿ ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಹೊಸಹಳ್ಳಿ ಬಂಧಿತ ಆರೋಪಿ. ಕೊರೊನಾದ ಈ ವೇಳೆ ಕೆಲಸವಿಲ್ಲದೆ ಪರದಾಡುತ್ತಿದ್ದ ಜನರಿಗೆ ರಾಜಕಾರಿಗಳು ಹಾಗೂ ಅವರ ಕುಟುಂಬಸ್ಥರು ಪರಿಚಯವಿರುವುದಾಗಿ ಸುಳ್ಳು ಹೇಳಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ವಸೂಲಿ ಮಾಡಿ ಬಳಿಕ ಅವರಿಗೆ ಮೋಸ ಮಾಡುತ್ತಿದ್ದ.
ಈತ ಈ ರೀತಿಯಾಗಿ ಹೇಳಿ 10ಕ್ಕೂ ಹೆಚ್ಚು ಜನರಿಂದ 1 ಕೋಟಿಗೂ ಅಧಿಕ ಹಣ ವಂಚಿಸಿದ್ದ ಎನ್ನಲಾಗಿದೆ. ಇದೀಗ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.