Publish Date: Fri, 14 Apr 2023 (16:00 IST)
Updated Date: Fri, 14 Apr 2023 (15:49 IST)
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ BJPಗೆ ರಾಜೀನಾಮೆ ನೀಡಲಿದ್ದು, ಆಪರೇಷನ್ ಕಮಲ ನಡೆಸಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಟಿಕೆಟ್ ವಂಚಿತರು ಪಕ್ಷ ತೊರೆಯುವುದನ್ನು ತಡೆಯಲು ಬಿಜೆಪಿ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಇದೀಗ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಬಂಡಾಯದ ಬಾವುಟ ಹಾರುತ್ತಿರುವ ಹಿನ್ನೆಲೆ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಎಲ್ಲಾ ಅಭ್ಯರ್ಥಿಗಳ ತುರ್ತು ಸಭೆ ಕರೆದಿದ್ದು, ಸಭೆ ನಡೆಸಲಿದ್ದಾರೆ. ಅಸಮಾಧಾನಿತರನ್ನು ಸಮಾಧಾನಿಸಲಿದ್ದಾರೆ.