Publish Date: Fri, 14 Apr 2023 (15:40 IST)
Updated Date: Fri, 14 Apr 2023 (15:28 IST)
ಯಾವುದೇ ಷರತ್ತು ಇಲ್ಲದೆ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ತಿದ್ದಾರೆ, ಸವದಿ ನಮ್ಮ ಕುಟುಂಬ ಸದಸ್ಯರಾಗಲು ಒಪ್ಪಿದ್ದಾರೆ ಎಂದು ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಜೆ 4 ಗಂಟೆಗೆ MLC ಸ್ಥಾನಕ್ಕೆ ಸವದಿ ರಾಜೀನಾಮೆ ಕೊಡ್ತಾರೆ, ಸಂಜೆ 4.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಸವದಿ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ, ಸವದಿ ಜೊತೆಗೆ ಇನ್ನೂ ಹಲವರು ಕಾಂಗ್ರೆಸ್ಗೆ ಬರ್ತಾರೆ ಎಂದು ಡಿಕೆಶಿ ಮತ್ತೊಂದು ಬಾಂಬ್ ಸಿಡಿಸಿದ್ರು. HAL ವಿಮಾನ ನಿಲ್ದಾಣದಿಂದ ನೇರವಾಗಿ KPCC ಅಧ್ಯಕ್ಷ D.K. ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ರಹಸ್ಯ ಸ್ಥಳಕ್ಕೆ ತೆರಳಿದ್ರು. ಆನಂತರ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ರು.