Publish Date: Sun, 15 Dec 2019 (14:59 IST)
Updated Date: Sun, 15 Dec 2019 (15:01 IST)
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಹಾಗೂ ಪಕ್ಷವನ್ನು ಮುಗಿಸೋಕೆ ಸಾಧ್ಯವೇ ಇಲ್ಲ.
ಹೀಗಂತ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ದೇಶದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರಿಗೆ ಜನರ ಮತ್ತು ದೇವರ ಆಶೀರ್ವಾದ ಇರುವ ತನಕ ಯಾವ ಪಕ್ಷದವರು ರಾಜಕೀಯವಾಗಿ ದೇವೇಗೌಡರನ್ನು ಹಾಗೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಎಲ್.ದೇವರಾಜು ಅವರನ್ನು ಗೆಲ್ಲಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಕೆಆರ್ಪೇಟೆ ಪಟ್ಟಣದ ನಂಜಮ್ಮ-ಮುದ್ದೇಗೌಡ ಸಮುದಾಯ ಭವನದಲ್ಲಿ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ಹಾಗೂ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ್ರು.
ಜೆಡಿಎಸ್ ಪಕ್ಷವು ಕನ್ನಡ ನಾಡಿನ ಪ್ರಾದೇಶಿಕ ಪಕ್ಷವಾಗಿದೆ. ಪಕ್ಷವು ಹಲವು ಬಾರಿ ಸೋತಿದೆ. ಮತ್ತೊಮ್ಮೆ ಭರ್ಜರಿ ಜಯ ಸಾಧಿಸಿದೆ. ಪಕ್ಷವು ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ. ಸೋಲಿಗೆ ಹೆದರಬೇಕಿಲ್ಲ. ನಮ್ಮಿಂದ ನಾವು ಸೋತಿದ್ದೀವಿ. ನಾಯಕರನ್ನು ದೂಷಣೆ ಮಾಡಲ್ಲ.
ಇಲ್ಲಿ ಕಾಂಗ್ರೆಸ್ ಸೋಲುತ್ತದೆ ಅಂತಾ ಗೊತ್ತಾಯ್ತು. ಇಲ್ಲಿ ಬಿಜೆಪಿ, ಹುಣಸೂರಲ್ಲಿ ಕಾಂಗ್ರೆಸ್ ಒಳ ಒಪ್ಪಂದ ಆಗಿ ಒಳೇಟು ಆಗಿದೆ. ಇದು ನನಗೆ ಗೊತ್ತಾಗಿ. ಪುಟ್ಟರಾಜು ಮತ್ತು ದೇವರಾಜು ಅವರಿಗೆ ಹೇಳಿದ್ದೆ ಎಂದರು.