Publish Date: Sun, 15 Dec 2019 (14:31 IST)
Updated Date: Sun, 15 Dec 2019 (14:33 IST)
ಆತನ ಮಗಳನ್ನು ಹುಡುಗನೊಬ್ಬ ಚುಡಾಯಿಸುತ್ತಿದ್ದನು. ಏಕೆ ಚುಡಾಯಿಸುತ್ತಿರುವೆ ಎಂದು ಕೇಳಿದ್ದಕ್ಕೆ ಹುಡುಗಿಯ ತಂದೆಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿರೋ ಅಮಾನವೀಯ ಘಟನೆ ನಡೆದಿದೆ.
ಕಲಬುರಗಿಯ ಬಾಪು ನಗರದಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯ ತಂದೆ ಈಶ್ವರ್ ಗಾಯಗೊಂಡು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈಶ್ವರ್ ನ ಮಗಳಿಗೆ ಬಾಪು ನಗರದ ನಿವಾಸಿ ವಿಕಾಸ್ ಚುಡಾಯಿಸುತ್ತಿದ್ದನೆನ್ನಲಾಗಿದೆ. ಹೀಗಾಗಿ ವಿಕಾಸ್ ಮನೆಗೆ ಈಶ್ವರ್ ಹೋಗಿದ್ದಾರೆ. ಆಗ ವಿಕಾಸ್ ಹಾಗೂ ಆತನ ತಂದೆ ಬಂಧನ್ ಅಲಿಯಾಸ್ ಲಾಲ್ ಬಹಾದ್ದೂರ ಉಪಾಧ್ಯಾಯ ಸೇರಿ ಚಾಕುವಿನಿಂದ ತಿವಿದು ಹಲ್ಲೆ ನಡೆಸಿದ್ದಾರೆ.
ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.