Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಂಜನ್ ಸಾಬ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

ರಂಜನ್ ಸಾಬ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ
ಬಳ್ಳಾರಿ , ಮಂಗಳವಾರ, 25 ಸೆಪ್ಟಂಬರ್ 2018 (17:06 IST)
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮ್ರತಪಟ್ಟ ರಂಜನ್ ಸಾಬ್ ರವರ ನೆನಪಿಗಾಗಿ ನಗರದಲ್ಲಿ ಅವರ ಪುತ್ಧಳಿಯನ್ನು  ನಿರ್ಮಾಣ ಮಾಡುವಂತೆ ಆಗ್ರಹಿಸಲಾಗಿದೆ.

ಕನ್ನಡ ಕ್ರಿಯಾ ಸಮಿತಿಯ ಸದಸ್ಯ ಅಪ್ಪಟ ಕನ್ನಡ ಪ್ರೇಮಿ 1953 ರಲ್ಲಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮ್ರತಪಟ್ಟ ರಂಜನ್ ಸಾಬ್ ರವರ ನೆನಪಿಗಾಗಿ ಬಳ್ಳಾರಿ ನಗರದಲ್ಲಿ ಅವರ ಪುತ್ಧಳಿಯನ್ನು  ನಿರ್ಮಾಣ ಮಾಡುವಂತೆ ಅಗ್ರಹಿಸಿ  ಕರ್ನಾಟಕ ಜನ ಸ್ಯೆನ್ಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮೈಸೂರು  ಪ್ರಾಂತ ಸೇರಲು ಕೆಲ ಕಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರದಲ್ಲಿ ಬಳ್ಳಾರಿ, ಮೈಸೂರು ವೀಲಿನದ ಸಂಭ್ರಮಾಚರಣೆಗಾಗಿ ಬಳ್ಳಾರಿನಗರದಲ್ಲಿ ನಿರ್ಮಿಸಿದ್ದ ಸಭಾ ವೇದಿಕೆಯನ್ನು ಸುಡಲು ಕೆಲ ವಿರೋಧಿಗಳು ಪ್ರಯತ್ನಿಸಲ್ಕಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಸಭಾ ಮಂಟಪದ ರಕ್ಷಣೆಯ ಹೊಣೆ ಹೊತ್ತು ಅಲ್ಲಿಯೇ ಮಲಗಿದ್ದ ರಂಜಾನ್ ಸಾಬ್ ಮೇಲೆ ಕೆಲ ದುಷ್ಕರ್ಮಿಗಳು ಆಸಿಡ್ ಬಾಂಬ್ ಎಸೆದ ಹಿನ್ನಲೆಯಲ್ಲಿ ಅವರು ಅಲ್ಲಿಯೇ ಸಾವನ್ನಪ್ಪಿದ್ದರು.
ಅವರು ಹುತ್ಮಾತರಾದ ನೆನಪಿಗಾಗಿ ಬಳ್ಳಾರಿ ನಗರದ ಪ್ರಮುಖ ವೃತ್ತದಲ್ಲಿ ಅವರ ಪುತ್ಥಳಿ ನಿರ್ಮಿಸಲು ಅಗ್ರಹಿಸಿ ಹಲವು  ಮನವಿ ಸಲ್ಲಿಸಿದ್ದರೂ  ನಿರ್ಲಕ್ಷ್ಯವಹಿಸುತ್ತಾ ಬರಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕ್ಕೆ ಗೊಳ್ಳುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಕರ್ನಾಟಕ ಜನ ಸೈನ್ಯ ರಾಜಾಧ್ಯಕ್ಷ  ಎರ್ರಿಸ್ವಾಮಿ, ಉಪಾಧ್ಯಕ್ಷ ಹೊನ್ನೂರಪ್ಪ, ಫಯಾಜ್ ಭಾಷ, ಚಿದಾನಂದ ಇನ್ನಿತರರು ಭಾಗಹಿಸಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಮಲೀನವಾಗುತ್ತಿದ್ದಾಳೆ ಘಟಪ್ರಭೆ