Publish Date: Tue, 25 Sep 2018 (16:18 IST)
Updated Date: Tue, 25 Sep 2018 (16:20 IST)
ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆ ಹಿನ್ನಲೆ ಮನೆ ಕುಸಿತಗೊಂಡಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಕಳೆದ ರಾತ್ರಿಯಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆ ಮನೆ ಕುಸಿತವಾಗಿರುವ ಘಟನೆ ಸಂಭವಿಸಿದೆ. ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಿಂಗದೇವರು ಎಂಬುವರಿಗೆ ಸೇರಿದ ಮನೆ ಇದಾಗಿದೆ. ಮನೆ ಕುಸಿತದಿಂದ ಮನೆಯಲ್ಲಿ ಇದ್ದ ವಸ್ತುಗಳು ಹಾನಿಯಾಗಿವೆ.
ಇನ್ನೂ ಮನೆಯವರು ಮನೆಯ ಮುಂದೆ ಇದ್ದ ವೇಳೆ ಮನೆ ಕುಸಿತವಾಗಿದ್ದು, ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯ ಅವಘಡದಿಂದ ಮನೆ ಕಳೆದುಕೊಂಡ ಲಿಂಗದೇವರು ಕುಟುಂಬ ಬೀದಿಗೆ ಬಂದಂತಾಗಿದೆ.