Webdunia - Bharat's app for daily news and videos

Install App

ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ: ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ

Webdunia
ಶುಕ್ರವಾರ, 4 ಫೆಬ್ರವರಿ 2022 (14:21 IST)
ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್ ತನ್ನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಆದಾಯ ಕುಸಿದಿದೆ.
2021 ರ ಡಿಸೆಂಬರ್‌ನ ಮೂರನೇ ತ್ರೈಮಾಸಿಕಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 192.3 ಕೋಟಿಗೆ ಕುಸಿತ ಕಂಡಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಫೇಸ್‌ಬುಕ್‌ಗೆ 193ಕೋಟಿ ಬಳಕೆದಾರರಿದ್ದರು ಎಂದು ಮೆಟಾ ನೆಟ್‌ವರ್ಕ್ಸ್ ಮಾಹಿತಿ ನೀಡಿದೆ.
ಮೆಟಾ ನೆಟ್‌ವರ್ಕ್ಸ್‌ನ ಈ ಮಾಹಿತಿ ಷೇರುಪೇಟೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಿನ್ನೆ ಒಂದೇ ದಿನದಲ್ಲಿ ಫೇಸ್‌ಬುಕ್ ಷೇರುಗಳ ಮೌಲ್ಯ ಶೇ,26ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಗೆ 16 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.
ಟಿಕ್‌ಟಾಕ್, ಯೂಟ್ಯೂಬ್ ಹಾಗೂ ಇತರೆ ಜಾಲತಾಣಗಳೊಂದಿಗೆ ಸ್ಪರ್ಧೆ ಹೆಚ್ಚಾಗಿದ್ದು, ಆದಾಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಜಾಹೀರಾತುಗಳ ಸಂಖ್ಯೆಯೂ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಫೇಸ್‌ಬುಕ್‌ನ 16 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋಗಿದ್ದರಿಂದ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ನಿವ್ವಳ ಮೌಲ್ಯ ಆಸ್ತಿಯಲ್ಲಿ ಶೇ.23.24 ರಷ್ಟು ಕಳೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಿಜಕ್ಕೂ ಪವಾಡ.. ಸ್ನೇಹಿತರ ಜೊತೆ ಹರಟುತ್ತಿದ್ದವನು ಸೆಕೆಂಡುಗಳಲ್ಲಿ ಜೀವ ಉಳಿಸಿಕೊಂಡ Video

ಮಮ್ಮಿ ಕಾಪಾಡಿ... ಎಂದು ಪ್ರಾಣಕ್ಕಾಗಿ ಹೋರಾಡುತ್ತಿದ್ದ ಹುಡುಗಿಯನ್ನು ಕಾಪಾಡಲು ಬಂದವನು ಯಾರು ಗೊತ್ತಾ Video

ಸ್ವಲ್ಪ ಊಟ ಹಾಕಮ್ಮಾ ಎಂದಿದ್ದಕ್ಕೆ ಮಾವನಿಗೆ ಮುಖ ಮೂತಿ ನೋಡದೇ ಚಚ್ಚಿದ ಸೊಸೆ Video

ಕರ್ನಾಟಕ ಬಂದ್ಗೆ ಕನ್ನಡ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ: ಬಂದ್ ಆಗುತ್ತಾ ಇಲ್ವಾ

ಮುಂದಿನ ಸುದ್ದಿ
Show comments