Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಬೆಂಗಳೂರಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಒಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಗ್ಯಾರೇಜ್ ಸುಟ್ಟು ಕರಕಲಾಗಿದೆ.
ವಿವೇಕನಗರ ಮುಖ್ಯರಸ್ತೆಯ ವನ್ನಾರ್ ಪೇಟ್ ಬಳಿಯ ಕಾರು ಗ್ಯಾರೇಜ್ ನಲ್ಲಿ ಈ ಅವಘಡ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಗ್ಯಾರೇಜ್ ನಲ್ಲಿದ್ಸ 3 ಬೈಕ್ 4 ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಅಷ್ಟೇ ಅಲ್ಲದೇ ಗ್ಯಾರೇಜ್ನಲ್ಲಿದ್ದ ಎರಡು ಸಿಲಿಂಡರ್ ಕೂಡ ಸ್ಪೋಟಗೊಂಡಿವೆ. ಸುಮಾರು 500 ಮೀಟರ್ ನಷ್ಟು ದೂರ ಸಿಲಿಂಡರ್ ಬ್ಲಾಸ್ಟ್ ಆದ ಶಬ್ಧ ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಮಧ್ಯರಾತ್ರಿ ಏರಿಯಾ ಜನ ಗಾಬರಿಗೊಂಡಿದ್ದಾರೆ.
ನಾಸೀರ್ ಎಂಬುವವರ ಮಾಲೀಕತ್ವದ ಗ್ಯಾರೇಜ್ ಇದ್ದಾಗಿದ್ದು, ಸತತ ಒಂದುವರೆ ಗಂಟೆಗಳ ಕಾರ್ಯಾಚರಣೆ ಬಳಿಕ 3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಇನ್ನೂ ಬೆಂಕಿ ಬೀಳುತ್ತಿದ್ದಂತೆ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಧಗಧಗಿಸ್ತಿದ್ದ ಗ್ಯಾರೇಜ್ ನಿಂದ ಮಾಲೀಕ ಕಾರು ಹೊರ ತಂದಿದ್ದಾನೆ. ಪೋಲೊ,ಹ್ಯೂಂಡೈ ಕಂಪನಿ ಕಾರು ಸೇರಿದಂತೆ ಮೂರು ಕಾರುಗಳ ರಕ್ಷಣೆ ಮಾಡಿದ್ದಾನೆ. ಅದಾಗಿಯು ಗಾಜು ಒಡೆದಿದ್ದು,ಕಾರಿನ ಮುಂಭಾಗ ಸುಟ್ಟು ಹೋಗಿವೆ.