Publish Date: Thu, 23 Jul 2020 (15:10 IST)
Updated Date: Thu, 23 Jul 2020 (15:12 IST)
ರಾಜ್ಯದಲ್ಲಿ ಇಬ್ಬರು ಸರಕಾರಿ ವೈದ್ಯರಿಗೆ ಡೆಡ್ಲಿ ವೈರಸ್ ತಗುಲಿದ್ದು, ಗ್ರಾಮ ಲೆಕ್ಕಿಗ ಸೇರಿದಂತೆ 50 ಜನರಿಗೆ ಕೊರೊನಾ ವಕ್ಕರಿಸಿದೆ.
ಇಬ್ಬರು ಸರ್ಕಾರಿ ವೈದ್ಯರು, ಓರ್ವ ಗ್ರಾಮ ಲೆಕ್ಕಿಗ ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ 50 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಹಾವೇರಿಯಲ್ಲಿ ಈವರೆಗೆ 584 ಕೋವಿಡ್-19 ಪ್ರಕರಣಗಳು ದೃಢಗೊಂಡಿವೆ. ಒಟ್ಟು 347 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 19 ಮಂದಿ ಮೃತಪಟ್ಟಿದ್ದು, 218 ಪ್ರಕರಣಗಳು ಸಕ್ರಿಯವಾಗಿವೆ.