Publish Date: Mon, 20 Jul 2020 (21:42 IST)
Updated Date: Mon, 20 Jul 2020 (21:45 IST)
ಬಿಜೆಪಿಯ ಎಲ್ಲಾ ಶಾಸಕರು, ಸಂಸದರಿಗೆ, ಸಚಿವರಿಗೆ ಕೊರೊನಾ ಬರಲಿ.
ಜನರ ಹಿತಾಸಕ್ತಿಯನ್ನು ಕಾಪಾಡಬೇಕಿದೆ. ಆ ಉದ್ದೇಶಕ್ಕಾದರೂ ಬಿಜೆಪಿಯ ಶಾಸಕರು, ಸಂಸದರು ಹಾಗೂ ಮಂತ್ರಿಗಳಿಗೆ ಕೊರೊನಾ ಬರಲಿ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಆಶಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದೆ.
ಕೊಪ್ಪಳದ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿಗೆ ಪಾಸಿಟಿವ್ ಬಂದಿದೆ. ಆಗ ಕೂಡಲೇ ಜಿಲ್ಲೆಗೆ ಬಂದ ಸಚಿವ ಬಿ.ಸಿ.ಪಾಟೀಲ್ ಏಕಾಏಕಿಯಾಗಿ ಗಂಗಾವತಿಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ.
ಕೇವಲ ಬಿಜೆಪಿ ಶಾಸಕರು, ಮಂತ್ರಿಗಳಿಗೆ, ಸಂಸದರಿಗೆ ಕೊರೊನಾ ಬಂದರೆ ಸರಕಾರ ಸ್ಪಂದಿಸುತ್ತದೆ. ಬಡಜನರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ ಎಂದು ಅವರು ದೂರಿದ್ದಾರೆ.