ದತ್ತ ಜಯಂತಿಗೆ ದತ್ತ ಮಾಲೆಧರಿಸುವುದರ ಮೂಲಕ ಚಾಲನೆ ನೀಡಲಾಗಿದೆ.
ರಾಜ್ಯದ್ಯಂತ ದತ್ತ ಮಾಲೆ ಧರಿಸಲಿರುವ ದತ್ತ ಭಕ್ತರು ಸಂಚಾರ ಮಾಡಲಿದ್ದಾರೆ. ಸುಮಾರು 10 ದಿನಗಳ ಕಾಲ ಮಾಲೆ ಧರಿಸಿ ವ್ರತಾಚರಣೆ ಮಾಡಲಿರುವ ದತ್ತ ಭಕ್ತರು ರಾಜ್ಯದ್ಯಂತ ಸಂಚರಿಸಲಿದ್ದಾರೆ.
ಮಾತೆಯರಿಂದ 20ರಂದು ಅನುಸೂಯ ಜಯಂತಿ ನಡೆಯಲಿದೆ. 21 ಕ್ಕೆ ಚಿಕ್ಕಮಗಳೂರು ನಗರಾದ್ಯಂತ ಸಂಕೀರ್ತನ ಯಾತ್ರೆ ನಡೆಯಲಿದೆ. ಡಿ. 22 ರಂದು ದತ್ತ ಮಾಲಾಧಾರಿಗಳಿಂದ ದತ್ತ ಪಾದುಕೆ ದರ್ಶನ ಕಾರ್ಯಕ್ರಮ ನಡೆಯಲಿದೆ.
ಹೋಮ, ಹವನ, ಪೂಜೆಯೊಂದಿಗೆ ದತ್ತ ಪಾದುಕೆ ದರ್ಶನ ಪಡೆಯಲಾಗುತ್ತದೆ.
ಶ್ರೀ ಇನಾಂ ಗುರು ದತ್ತಾತ್ರೇಯ ಬಾಬ ಬುಡನ್‌ಗಿರಿ ಪೀಠದಲ್ಲಿ ನಡೆಯಿಲ್ಲಿರುವ ದತ್ತ ಜಯಂತಿಯ ಅಂಗವಾಗಿ ರಥಯಾತ್ರೆಗೆ ಚಾಲನೆಯನ್ನೂ ನೀಡಲಾಗುತ್ತಿರುವುದು ವಿಶೇಷ. ಚಿಕ್ಕಮಗಳೂರು ಜಿಲ್ಲಾದ್ಯಂತ ದತ್ತ ರಥಯಾತ್ರೆ ಸಂಚರಿಸಲಿದೆ.