ಅಲ್ಲಿ ಎಲ್ಲೆಲ್ಲೂ ಕನ್ನಡದ ಬಾವುಟಗಳು ಹಾರಾಡುತ್ತಿದ್ದವು… ಕನ್ನಡ ಕಸ್ತೂರಿಯ ಕಂಪು ಎಲ್ಲೆಡೆ ಮನೆಮಾಡಿತ್ತು… ಇದಕ್ಕೆ ಹೊಳಪು ನೀಡುವಂತೆ ಬೆಳ್ಳಿ ರಥದಲ್ಲಿ ಕನ್ನಡ ಸಾಹಿತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಹಾವೇರಿ ಜಿಲ್ಲೆಯ ತುಂಬ ಕನ್ನಡ ಕಸ್ತೂರಿಯ ಕಂಪು ಮನೆಮಾಡಿದೆ. ಎಲ್ಲಡೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಶಾಲಾ ಮಕ್ಕಳಿಂದ ವೇಷ ಭೂಷಣ, ನೃತ್ಯ, ಕಂಸಾಳೆ, ಡೊಳ್ಳು ಕುಣಿತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ರಥದಲ್ಲಿ ಕುಳಿತು ಮೆರವಣಿಗೆಯಲ್ಲಿ ಬಂದ ಕನ್ನಡ ಸಾಹಿತಿ ಸಿದ್ದುಮತಿ ನೆಲವಿಗಿ ಗಮನ ಸೆಳೆದರು.
ಹಾವೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನ ಹಾವೇರಿಯ ಸಾಹಿತಿ ಸಿದ್ದುಮತಿ ನೆಲವಿಗಿ ವಹಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ನೇಹರು ಓಲೇಕಾರ, ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು, ಸಾಹಿತಿಗಳು, ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು.