Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರುದ್ರಾಕ್ಷಿಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?

ರುದ್ರಾಕ್ಷಿಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 13 ನವೆಂಬರ್ 2018 (10:09 IST)
ಬೆಂಗಳೂರು : ರುದ್ರಾಕ್ಷಿಗಳು ಶಿವನ ಪ್ರಿಯವಾದುದರಿಂದ ಯಾರು ಬೇಕಾದರು ಇದನ್ನು ಧರಿಸಿಕೊಳ್ಳಬಹುದು. ಇದನ್ನು ಧರಿಸುವುದರಿಂದ ಸುಖ ಶಾಂತಿ ನೆಮ್ಮದಿ ದೊರಕುತ್ತದೆ. ರುದ್ರಾಕ್ಷಿಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಯಾವುದನ್ನು ಧರಿಸಿದ್ರೆ ಏನು ಫಲ ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳೋಣ.


ಏಕಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶಿವನ ಸ್ವರೂಪವೆಂದು ಕರೆಯುತ್ತಾರೆ ಇದನ್ನು ಧರಿಸುವುದರಿಂದ ಮನೋ ಇಚ್ಚೆ ಪೂರೈಸುವುದು ಧನ ವೃದ್ಧಿಯಾಗುತ್ತದೆ.


ದ್ವಿಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಚಂದ್ರ ಸ್ವರೂಪವೆಂದು ಕರೆಯುವರು ಇದನ್ನು ಮಹಿಳೆಯರು ಧರಿಸಿದರೆ ಒಳ್ಳೆಯದು ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ ಆಕರ್ಷಣ ಶಕ್ತಿ ಹೆಚ್ಚಿಸುತ್ತದೆ.


ತ್ರಿಮುಖ ರುದ್ರಾಕ್ಷಿ :ಈ ರುದ್ರಾಕ್ಷಿಯನ್ನು ಕುಜನ ಸ್ವರೂಪವೆಂತಲೂ ಕರೆಯುವರು ಇದನ್ನು ಧರಿಸಿದರೆ ರಕ್ತ ಸಂಚಾರಕ್ಕೆ ಮತ್ತು ಕೋಪ ಕಡಿಮೆಯಾಗುವುದಕ್ಕೆ ಶತೃಗಳ ನಾಶಕ್ಕೆ ಒಳ್ಳೆಯದಾಗುತ್ತದೆ.


ಚತುರ್ಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಬುಧನ ಸ್ವರೂಪವೆಂದು ಕರೆಯುವರು ಇದನ್ನು ಧರಿಸಿದರೆ ಮಕ್ಕಳ ವಿದ್ಯೇ ಬುದ್ದಿಗೆ ಅನುಕೂಲವಾಗುವುದು ವಾಕ್ ವೃದ್ಧಿಯುವಾಗುತ್ತದೆ.


ಪಂಚಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಗುರುವಿನ ಸ್ವರೂಪವೆಂತಲೂ ಕರೆಯುತ್ತಾರೆ. ಇದನ್ನು ಧರಿಸುವುದರಿಂದ ಉತ್ತಮ ಜ್ಞಾನವನ್ನು ಗಳಿಸುವರು ಧಾರ್ಮಿಕಕ್ಷೇತ್ರ ಮನಸ್ಸಿಗೆ ಶಾಂತಿ ದೊರಕುವುದು.


ಷಷ್ಟಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶುಕ್ರನ ಸ್ವರೂಪವೆಂದು ಕರೆಯುವರು. ಇದನ್ನು ಧರಿಸುವುದರಿಂದ ಹೃದಯಘಾತ, ಬಿ ಪಿ ಗಳಂತ ರೋಗಗಳಿಂದ ದೂರವಾಗಬಹುದು.


ಸಪ್ತಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶನಿದೇವನ ಸ್ವರೂಪವೆಂದು ಕರೆಯುವರು. ಇದನ್ನು ಧರಿಸುವುದರಿಂದ ಜೀವನದಲ್ಲಿ ಉನ್ನತ ಸ್ಥಾನಗಲಿಸಲು ಮತ್ತು ವ್ಯಾಪಾರದಲ್ಲಿ ಲಾಭಗಳಿಸಲು ಶುಭವಾಗಿದೆ.


ದಶಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ವಿಷ್ಣುವಿನ ಸ್ವರೂಪವೆಂದು ಕರೆಯುವರು ಇತನ್ನು ಧರಿಸುವುದರಿಂದ ಮಾಟ ಮಂತ್ರ ಭೂತ ಚೇಷ್ಟೆ ಕಂಟಕಗಳಿಂದ ಮುಕ್ತಿಯೊಂದಿ ಗೌರವ ಸನ್ಮಾನದೊರಕುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೀರನ್ನು ಈ ರೀತಿ ಮಾಡಿದ್ರೆ ದೋಷ ತಟ್ಟುತ್ತದೆಯಂತೆ