Publish Date: Thu, 17 Aug 2023 (18:30 IST)
Updated Date: Thu, 17 Aug 2023 (18:38 IST)
ಮೈಸೂರಿನ ಕಿಂಗ್ ಫಿಷರ್ ಬಿಯರ್ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ.ಬಿಯರ್ನಲ್ಲಿ ಅಪಾಯಕಾರಿ ಸೆಡಿಮೆಂಟ್ ಇರುವ ಬಗ್ಗೆ ಲ್ಯಾಬ್ನಲ್ಲಿ ದೃಢವಾಗಿದ್ದು, ಈ ಬಿಯರ್ ಬಾಕ್ಸ್ಗಳನ್ನ ವಿವಿಧ KSBCL ಹಾಗೂ RVB ಸನ್ನದುದಾರರಿಗೆ ಸಾಗಣೆ ಮಾಡಲಾಗಿದೆ. ನಂಜನಗೂಡಿನ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಈ ಬಿಯರ್ನ್ನು ತಯಾರಿಸಿದ್ದು, ಅಂಗಡಿಗಳಿಗೆ ವಿತರಣೆ ಮಾಡದಂತೆ ಸೂಚನೆ ನೀಡಲಾಗಿದೆ. ಸದ್ಯ ಈ ಬಿಯರ್ ವಿತರಣೆ ಮಾಡದಂತೆ ಅಬಕಾರಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.