Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉತ್ತರ ಖಂಡದಿಂದ ಬಳ್ಳಾರಿಗೆ ಬಂದ ಕೊರೊನಾ ವೈರಸ್

ಉತ್ತರ ಖಂಡದಿಂದ ಬಳ್ಳಾರಿಗೆ ಬಂದ ಕೊರೊನಾ ವೈರಸ್
ಬಳ್ಳಾರಿ , ಮಂಗಳವಾರ, 5 ಮೇ 2020 (15:04 IST)
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇದೀಗ ಉತ್ತರ ಖಂಡದಿಂದ ಭಯ ಶುರುವಾಗಿದೆ.

ಬಳ್ಳಾರಿಯಲ್ಲಿ ಈ ವರೆಗೆ ಪತ್ತೆಯಾಗಿದ್ದ 13 ಕೋವಿಡ್ -19 ಪಾಸಿಟಿವ್ ಬಂದಿದ್ದ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಒಬ್ಬೊರಾಗಿ ಹೊರ ಬರುತ್ತಿರುವ ಸಂತಸದ ಸುದ್ದಿ ಕೇಳುತ್ತಿದ್ದವು. ಈಗ ನಗರದ ಜನತೆಗೆ ಆಂತಕ ಮೂಡಿಸುವ ರೀತಿಯಲ್ಲಿ ಮತ್ತೊಬ್ಬರಿಗೆ ಕೋವಿಡ್-19 ಸೋಂಕಿನಿಂದ ಪಾಸಿಟಿವ್ ಬಂದಿದೆ.

ಇಲ್ಲಿನ ಕೌಲ್ ಬಜಾರ್ ಪ್ರದೇಶದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಆತನನ್ನು ಈಗ ನಗರದ ಕೋವಿಡ್ ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡಿಗೆ ಕರೆ ತರಲಾಗಿದೆ. ಇದರಿಂದ ಆತನ ಜೊತೆ ಸಂಪರ್ಕದಲ್ಲಿದ್ದ ನಗರದ ಇನ್ನಿತರ 13 ಜನರನ್ನು ಮತ್ತು ಮನೆಯ 9 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಬಸ್‍ನ ಚಾಲಕ, ಕ್ಲೀನರ್, ಅವರು ಉತ್ತರಖಂಡ್ ದವರಾಗಿದ್ದು. ಆ ಬಗ್ಗೆ ಆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿದ್ದು ಮತ್ತು ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡುವ ಕಾರ್ಯ ನಡೆದಿದೆ.

ಉತ್ತರಖಂಡ್‍ನ ದರ್ಗಾ ವೊಂದರ ದರ್ಶನ ಪಡೆದು, ಮೊನ್ನೆಯಷ್ಟೇ ಬಸ್‍ನಲ್ಲಿ ಬಳ್ಳಾರಿಗೆ ಬಂದಿದ್ದ 18 ಜನರಲ್ಲಿದ್ದ ಒಬ್ಬರಿಗೆ  ಈ ಸೋಂಕು ತಗುಲಿದೆ. ನಗರಕ್ಕೆ ಸೇರಿದವರು 14 ಜನ ಮತ್ತು ನೆರೆಯ ಆಂಧ್ರ ಪ್ರದೇಶ ಕಣೆಕಲ್‍ಗೆ ಸೇರಿದ 4 ಜನ ಈ ಬಸ್ ನಲ್ಲಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಜಿಹಾದಿಗಳಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆ?