Publish Date: Sat, 18 Jul 2020 (15:23 IST)
Updated Date: Sat, 18 Jul 2020 (15:25 IST)
ಡೆಡ್ಲಿ ಕೊರೊನಾಕ್ಕೆ ಪರಿಣಾಮಕಾರಿ ತಡೆ ಹಾಕಲು ವಿಫಲವಾದ ಅಧಿಕಾರಿಯೊಬ್ಬರನ್ನು ಸರಕಾರ ವರ್ಗಾವಣೆ ಮಾಡಿದೆ ಎನ್ನಲಾಗಿದೆ.
ಬಿಬಿಎಂಪಿ ಕಮಿಷನರ್ ಆಗಿದ್ದ ಅನಿಲ್ ಕುಮಾರ್ ವರ್ಗಾವಣೆಗೊಂಡಿದ್ದು, ನೂತನ ಕಮಿಷನರ್ ಆಗಿ ಮಂಜುನಾಥ ಪ್ರಸಾದ್ ಬಂದಿದ್ದಾರೆ.
ಕೊರೊನಾ ವೈರಸ್ ನಿಗ್ರಹ ನಿಟ್ಟಿನಲ್ಲಿ ಅನಿಲ್ ಕುಮಾರ್ ಕೆಲಸ ಮಾಡಿದ್ದರೂ ಅದು ಬಹುಮಟ್ಟಿಗೆ ಸಕ್ಸಸ್ ಆಗಿಲ್ಲ ಎನ್ನಲಾಗಿದೆ.
ಅಲ್ಲದೇ ಬೆಂಗಳೂರಿನಲ್ಲಿ ಇನ್ನೂ 15 ದಿನ ಲಾಕ್ ಡೌನ್ ಜಾರಿ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯೇ ಅವರಿಗೆ ಮುಳುವಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.