Publish Date: Fri, 19 Jun 2020 (19:02 IST)
Updated Date: Fri, 19 Jun 2020 (19:10 IST)
ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಚಾಲಕನಾಗಿರುವ ವಿದ್ಯಾರ್ಥಿನಿಯ ತಂದೆಗೂ ಕೊರೊನಾ ವೈರಸ್ ತಗುಲಿದೆ. ಕೊರೊನಾ ವೈರಸ್ ಪೀಡಿತರ ಸಂಪರ್ಕದಲ್ಲಿ ವಿದ್ಯಾರ್ಥಿನಿ ಇದ್ದಳು ಎನ್ನಲಾಗಿದೆ.
ಬೆಂಗಳೂರಿನ ಜಯನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆದಿದ್ದು, ಆತಂಕ ಶುರುವಾಗಿದೆ.
ಕ್ವಾರಂಟೈನ್ ಸೀಲ್ ಹಾಕಿದ್ದರೂ ಅದನ್ನು ಅಳಿಸಿ, ಅಧಿಕಾರಿಗಳ ಕಣ್ಣು ತಪ್ಪಿಸಿ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾಳೆ ಎನ್ನಲಾಗಿದೆ.