Publish Date: Fri, 19 Jun 2020 (17:53 IST)
Updated Date: Fri, 19 Jun 2020 (17:56 IST)
ನೀವು ಬಟಾಟೆ ಪ್ರಿಯರಾಗಿದ್ದರೆ ಮನೆಯಲ್ಲಿಯೇ ಅದರಿಂದ ವಿಶೇಷವಾದ ಆಹಾರ ಪದಾರ್ಥ ತಯಾರಿಸಿ ತಿಂದು ಖುಷಿಪಡಬಹುದು.
ಏನೇನು ಬೇಕು?
ಆಲೂಗಡ್ಡೆ ಕಾಲು ಕಿಲೋ
ಖೋವಾ ಕಾಲು ಕಿಲೋ
ತುಪ್ಪ 350 ಗ್ರಾಂ
ಗೋಡಂಬಿ
ಏಲಕ್ಕಿ ಪುಡಿ
ಪನ್ನೀರು
ಸ್ವಲ್ಪ ಬೆಳ್ಳಿವರ್ತಿ
ಮಾಡೋದು ಹೇಗೆ?
ಸಕ್ಕರೆಯ ಪಾಕ ಮಾಡಿರಿ. ತುಪ್ಪಬಿಸಿ ಮಾಡಿರಿ. ಸಿಪ್ಪೆ ತೆಗೆದು ಪುಡಿ ಮಾಡಿದ ಆಲೂಗಡ್ಡೆ ಖೋವಾ ಎರಡನ್ನು ಸೇರಿಸಿ. ಸಕ್ಕರೆ ಪಾಕಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಕದಡಿ, ಒಂದು ತಟ್ಟೆಗೆ ತುಪ್ಪ ಸವರಿ ಹರಡಿ ಹಾಕಿ ಇಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.