Select Your Language

Notifications

webdunia
webdunia
webdunia
webdunia

ಹುಣ್ಣಿಮೆ ದಿನ ಮೂವರಿಗೆ ವಕ್ಕರಿಸಿದ ಕೊರೊನಾ

ಕೊರೊನಾ ವೈರಸ್

ಇಬ್ಬರು ಯುವಕರು ಮತ್ತು ಓರ್ವ ಯುವತಿಗೆ ಕೊರೋನಾ ಸೋಂಕು‌ ಕಂಡುಬಂದಿದೆ.

ಕಲಬುರಗಿ ನಗರದ ಇಬ್ಬರು ಯುವಕರು ಮತ್ತು ಓರ್ವ ಯುವತಿಗೆ ಕೊರೋನಾ ಸೋಂಕು‌ ಕಂಡುಬಂದಿದೆ.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ರೋಗಿ ಸಂಖ್ಯೆ-642 ನೇರ ಸಂಪರ್ಕದಲ್ಲಿ ಬಂದ ಕಲಬುರಗಿ ನಗರದ ಕರೀಂ ನಗರದ 35 ವರ್ಷದ ಯುವಕ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದಾನೆ. ಅದೇ ರೀತಿ ಕಲಬುರಗಿ ನಗರದ ರೋಗಿ ಸಂಖ್ಯೆ-641ರ ಸಂಪರ್ಕದಲ್ಲಿ ಬಂದ ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಯುವತಿ ಮತ್ತು 41 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 67 ರೋಗಿಗಳಲ್ಲಿ 6 ಜನ ನಿಧನ‌ರಾಗಿದ್ದು, 29 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 32 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಕುರಿಮರಿ ರಕ್ಷಿಸಲು ಹೋದ ಇಬ್ಬರ ಕಥೆ ಏನಾಯ್ತು?