Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ಟೈಮಿನಲ್ಲಿ ಮದುವೆ ಆಗ್ತೀರಾ? ಈ ಸೂತ್ರ ಪಾಲಿಸಿ

ಕೊರೊನಾ ಟೈಮಿನಲ್ಲಿ ಮದುವೆ ಆಗ್ತೀರಾ? ಈ ಸೂತ್ರ ಪಾಲಿಸಿ
ಧಾರವಾಡ , ಬುಧವಾರ, 6 ಮೇ 2020 (14:40 IST)
ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಂಟೈನ್‌ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಆಸಕ್ತರು ಮದುವೆಯಾಗಬಹುದು.

ಧಾರವಾಡ ಜಿಲ್ಲೆಯಾದ್ಯಂತ ವಿವಾಹಗಳನ್ನು ನಡೆಸಲು ರಾಜ್ಯ ಸರ್ಕಾರವು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿದೆ.

ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ,  ಮನರಂಜನೆ, ಶೈಕ್ಷಣಿಕ,  ಸಾಂಸ್ಕೃತಿಕ ಹಾಗೂ ಧಾರ್ಮಿಕ  ಕಾರ್ಯಗಳು ಮತ್ತು ಇತರ ಸಭೆಗಳನ್ನು ಮೇ 4 ರಿಂದ  ಜಾರಿಗೆ ಬರುವಂತೆ ಎರಡು ವಾರಗಳ ಅವಧಿಗೆ ನಿಷೇಧಿಸಲಾಗಿದೆ.

ಮದುವೆಗೆ ಸಂಬಂಧಿಸಿದ ಕೂಟಗಳಲ್ಲಿ  ಸಾಮಾಜಿಕ ಅಂತರವನ್ನು  ಕಾಪಾಡಿಕೊಳ್ಳಬೇಕು. ಗರಿಷ್ಠ 50 ಕ್ಕಿಂತ ಹೆಚ್ಚು  ಸಂಖ್ಯೆಯ ಅತಿಥಿಗಳು   ಭಾಗವಹಿಸಬಾರದು.

ಸಾರ್ವಜನಿಕ ಸ್ಥಳಗಳಲ್ಲಿ, ಸಮುದಾಯ ಭವನ , ಧಾರ್ಮಿಕ ಸ್ಥಳಗಳಲ್ಲಿ ಮದುವೆಗಳನ್ನು ಹಮ್ಮಿಕೊಳ್ಳಬಾರದು. ವಿವಾಹ ಆಯೋಜನೆಗೆ  ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ. 

 ವಿವಾಹದ ಉದ್ದೇಶಕ್ಕಾಗಿ ಯಾವುದೇ ಅಂತರ ರಾಜ್ಯಗಳ ಸಂಚಾರಕ್ಕೆ  ಅನುಮತಿ ಇಲ್ಲ.

 ಈ ಸಲಹೆಗಳನ್ನು ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ, 1897 (1897 ರ ಕೇಂದ್ರ ಸಾಂಕ್ರಾಮಿಕ ಕಾಯ್ದೆ -3), ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ನಿಯಮಗಳು 2020 ರ ಪ್ರಕಾರ ಕ್ರಮವನ್ನು ಜರುಗಿಸಲಾಗುತ್ತದೆ.

ಹೀಗಂತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ  ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಕ್ಕೆ ಗುಡ್ ಬೈ ಹೇಳಿದ್ದು ಯಾರು?