Publish Date: Wed, 06 May 2020 (20:47 IST)
Updated Date: Wed, 06 May 2020 (20:50 IST)
ಕೋಟೆನಾಡಿನಲ್ಲಿ ಏಕಾಏಕಿಯಾಗಿ 20 ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷರಾಗಿರೋದು ಜನರ ಆತಂಕಕ್ಕೆ ಕಾರಣವಾಗಿದೆ.
ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಸಮೀಪದ ಬೊಗಳೇರಹಟ್ಟಿ ಗ್ರಾಮದ ಬಳಿ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ ತಬ್ಲಿಘಿಗಳು.
ಅಹಮದಾಬಾದ್ ನಿಂದ ಅನುಮತಿ ಪಡೆದು ಕರ್ನಾಟಕಕ್ಕೆ ಬಂದಿದ್ದಾರೆ ತಬ್ಲಿಘಿಗಳು. ಆದರೆ ಈ ಕುರಿತು ಚಿತ್ರದುರ್ಗ ಡಿಸಿಗೆ ಮಾಹಿತಿಯನ್ನೇ ಕೊಟ್ಟಿಲ್ಲ ಎನ್ನಲಾಗಿದೆ.
ಗುಜರಾತಿನ ಎರಡು ಬಸ್ ಗಳಲ್ಲಿ ಬಂದಿರುವ ತಬ್ಲಿಘಿಗಳಿಂದ ಕೋಟೆನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಸದ್ಯ ಗ್ರೀನ್ ಝೋನ್ ನಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಚೆಕ್ ಪೋಸ್ಟ್ ಬಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.