Publish Date: Thu, 21 May 2020 (18:26 IST)
Updated Date: Thu, 21 May 2020 (18:28 IST)
ಮಹಿಳೆಯೊಬ್ಬರ ವಿರುದ್ಧ ಅವಾಚ್ಯವಾಗಿ ಬೈಯ್ದಿರುವ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ತಿರುಗಿ ಬಿದ್ದಿದೆ.
ಮಹಿಳೆಯ ಮಾತಿನಿಂದಾಗಿ ಸಚಿವರಿಗೆ ಕಿರಿಕಿರಿ ಎನಿಸಿರಬಹುದು. ಆದರೆ ಅಷ್ಟಕ್ಕೆ ಅವಾಚ್ಯವಾಗಿ ಬೈಯುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಿರಿಯ ಸಚಿವರಾಗಿ ಮಾಧುಸ್ವಾಮಿ ನಡೆದುಕೊಂಡಿದ್ದರ ಬಗ್ಗೆ ಆಶ್ಚರ್ಯ ಮೂಡಿಸಿದೆ ಎಂದಿರುವ ಡಿಕೆಶಿ, ಮಂತ್ರಿಗಳ ಹತ್ತಿರ ಯಾರೇ ಆಗಲಿ ಬಂದು ಕಷ್ಟ, ಸಮಸ್ಯೆ ಹೇಳಿಕೊಂಡಾಗ ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು ಎಂದು ಮಾಧುಸ್ವಾಮಿಗೆ ಟಾಂಗ್ ನೀಡಿದ್ದಾರೆ.