Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದೇ ಮನೆಯ 7 ಜನರಿಗೆ ಕೊರೊನಾ : ಮೊಮ್ಮಗಳನ್ನೂ ಬಿಡಲಿಲ್ಲ ಡೆಡ್ಲಿ ವೈರಸ್

ಒಂದೇ ಮನೆಯ 7 ಜನರಿಗೆ ಕೊರೊನಾ : ಮೊಮ್ಮಗಳನ್ನೂ ಬಿಡಲಿಲ್ಲ ಡೆಡ್ಲಿ ವೈರಸ್
ಹುಬ್ಬಳ್ಳಿ , ಗುರುವಾರ, 23 ಏಪ್ರಿಲ್ 2020 (14:20 IST)
ಶಾಲೆ ರಜೆ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಬಾಲಕಿ ಸೇರಿದಂತೆ ಒಂದೇ ಮನೆಯ 7 ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.

ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ. ಈ ಮೂಲಕ ಧಾರವಾಡ ಜಿಲ್ಲೆಯಲ್ಲಿ 9 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಇಲ್ಲಿಯವರೆಗೆ ಒಂದೇ ಕುಟುಂಬ ಏಳು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸಧ್ಯ P 236 ಸಂರ್ಪಕದಿಂದ ಇಬ್ಬರಿಗೆ ಕೊವಿಡ್ ಪಾಸಿಟಿವ್ ಬಂದಿದೆ. 30 ವರ್ಷದ ಮಹಿಳೆ ಹಾಗೂ 13 ವರ್ಷದ ಬಾಲಕಿಗೆ ಸೋಂಕು ತಗಲಿದೆ. P-236ನ ಕಿರಿಯ ಸಹೋದರಿ ಹಾಗೂ ಹಿರಿಯ ಸಹೋದರಿಯ ಪುತ್ರಿಗೆ ಸೋಂಕು ಕಾಣಿಸಿಕೊಂಡಿದೆ.

P-236 ನ ಮನೆಯಲ್ಲೇ ವಾಸವಿದ್ದಳು ಕಿರಿಯ ಸಹೋದರಿ. ಶಾಲೆ ರಜೆ ಹಿನ್ನೆಲೆಯಲ್ಲಿ ಮಾ.17ರಂದು ಅಜ್ಜಿಯ ಮನೆ, ಅಂದ್ರೆ P-236ನ ಮನೆಗೆ ತರಳಿದ್ದ 13 ವರ್ಷದ ಬಾಲಕಿಗೂ ಕೊರೊನಾ ತಗುಲಿರೋದು ದೃಢಪಟ್ಟಿದೆ. ಇಬ್ಬರಿಗೆ ಸೋಂಕು ಧೃಢ ಪಟ್ಟ ಹಿನ್ನೆಲೆ ಕೇಶ್ವಾಪುರದ ಸೋಂಕಿತರ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಬಂದ್ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಸ್ಥಿರತೆ