Publish Date: Mon, 01 May 2023 (20:30 IST)
Updated Date: Mon, 01 May 2023 (20:02 IST)
ನಮ್ಮ ಘೋಷಣೆಗಳನ್ನು ಕಾಂಗ್ರೆಸ್ ಕಾಪಿ ಮಾಡಿದೆ.. ಮಹಿಳೆಯರಿಗೆ ಉಚಿತ ಬಸ್ ಪಾಸ್ ನಮ್ಮ ಬಜೆಟ್ ಘೋಷಣೆ.
ಇದನ್ನು ಅವರು ಕಾಪಿ ಮಾಡಿದ್ದಾರೆ, ನಾವು ಮಾಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಉಚಿತ ಯೋಜನೆಗಳನ್ನು ದುಡಿಯುವ ವರ್ಗ, ಮಹಿಳೆಯರಿಗೆ ನೀಡಿದ್ದೇವೆ.. ಇಂದಿರಾ ಕ್ಯಾಂಟೀನ್ನಲ್ಲಿ ಅವ್ಯವಸ್ಥೆ, ಅಕ್ರಮ ಆಗಿತ್ತು, ಆಹಾರದಲ್ಲಿ ಗುಣಮಟ್ಟ ಇರಲಿಲ್ಲ.. ನಾವು ಗುಣಮಟ್ಟದ ಆಹಾರದ ಜತೆಗೆ ಪೂರ್ಣ ವ್ಯವಸ್ಥೆ ಬದಲಾಯಿಸಿದ್ದೇವೆ ಎಂದರು.. ಇನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಇಸ್ರೇಲ್ ಮಾದರಿ ಹೇಳಿದ್ರು, ಆದ್ರೆ ಜಾರಿ ಮಾಡಿರಲಿಲ್ಲ.. ಇಸ್ರೇಲ್ ಮಾದರಿ ಇಡೀ ಜಗತ್ತಿನಲ್ಲಿದೆ.. BPL ವರ್ಗಕ್ಕೆ ಸಹಾಯ ಮಾಡಲು ಉಚಿತ ಸಿಲಿಂಡರ್ ನೀಡುವ ಭರವಸೆ ಇದೆ.. ಪ್ರಣಾಳಿಕೆ ನಮಗೆ ದೊಡ್ಡ ಬೂಸ್ಟ್ ಕೊಡುತ್ತದೆ.. ನಮ್ಮ ಸಾಧನೆಗಳ ಜತೆ ಪ್ರಣಾಳಿಕೆ ಜನರಲ್ಲಿ ವಿಶ್ವಾಸ ಮೂಡಿಸುತ್ತೆ ಅಂತಾ ಸಿಎಂ ಬೊಮ್ಮಾಯಿ ತಿಳಿಸಿದ್ರು