ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಇಂದು ಸಾವಿರಾರು ಕಾರ್ಯಕರ್ತರು ಸೇರಿದಂತೆ ಕುಟುಂಬಸ್ಥರು, ಬೆಂಬಲಿಗರು ಸಾಥ್ ನೀಡಿದ್ರು.ನಾಮಪತ್ರ ಸಲ್ಲಿಸಿದ್ರು ಚುನಾವಣಾ ರಣರಂಗಕ್ಕೆ ಅಧಿಕೃತವಾಗಿ ಕಹಳೆ ಊದಿದ್ರು.. ಇದಕ್ಕೂ ಮೊದಲು ಇಗ್ಗಲೂರಿನ ದೇವಸ್ಥಾನ ಕ್ಕೆ ತೆರಳಿದ್ರು. ನಂತರ ಹೊಂಗಸದ್ರಕ್ಕೆ ಆಗಮಿಸಿ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮ ಸ್ವಾಮಿ ಪಾದದ ಬಳಿ ದಾಖಲೆಗಳನ್ನ ಇಟ್ಟು ಪೂಜೆ ಮಾಡಿಸಿದ್ರು. ಇದೇ ಸಂದರ್ಭ ದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತಿಯಿದ್ದರು. ಈ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್ ನ್ನ ಗಮನಿಸಿ ಸ್ವತಃ ತಾವೇ ಬಂದು ಟ್ರಾಫಿಕ್ ಕ್ಲಿಯರ್ ಮಾಡಿದ್ರು, ನಂತರ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯ ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ರು. ಇದೆ ವೇಳೆ ಬಿಟಿಎಂ ಶಾಸಕ ರಾಮಲಿಂಗಾರೆಡ್ಡಿ ಕೂಡ ಉಪಸ್ಥಿತಿ ಯಿದ್ರು. ನಂತರ ಮಾತನಾಡಿದ ರಾಮಲಿಂಗಾರೆಡ್ಡಿಭ್ರಷ್ಟ ಬಿಜೆಪಿ ಸರ್ಕಾರ ವನ್ನು ಕಿತ್ತೋಗೆಯಬೇಕು, ಈಬಾರಿ ಬೊಮ್ಮನಹಳ್ಳಿ ಯಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.
ನಂತರ ಮಾತನಾಡಿದ ಉಮಾಪತಿ ನಾಮಪತ್ರ ಸಲ್ಲಿಕೆಗೆ
ನೀತಿ ಸಂಹಿತೆ ಹಿನ್ನೆಲೆ ಹೆಚ್ಚು ಜನ ಬೇಡ ಎಂದಿದ್ದೆ, ಆದರೂ ನಾಮಪತ್ರ ಸಲ್ಲಿಕೆಗೆ ಜನಸಾಗರ ಹರಿದು ಬಂದಿದೆ ಜನರ ಉತ್ಸಾಹ ನೋಡಿದರೆ ಗೆಲುವು ನಮ್ಮದೆ ಎಂದ್ರು, ಕಾಂಗ್ರೆಸ್ ಅಭ್ಯರ್ಥಿ ಟೂರ್ ಬಂದಿದ್ದಾರೆ ಎಂಬ ಆರೋಪ ವಿಚಾರಕ್ಕೆ ಹೌದು ನಾನು ಟೂರ್ ಮಾಡ್ತಿನಿ ಅಂದ್ಕೋಳಿ, ಎಂಎಲ್ಎ ಯಾಕೇ ನಾಲ್ಕೂವರೆ ವರ್ಷ ಟೂರಲ್ಲಿ ಇದ್ರು, ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ದುಬೈ ಸುತ್ತಾಟ ,ಅದೇ ರೀತಿ ಬೊಮ್ಮನಹಳ್ಳಿ ಯಾಕೇ ಸುತ್ತಿಲ್ಲ ನಾವು ದುಡಿದು ಟೂರ್ ಮಾಡ್ತಿವಿ ಅವ್ರು ಕೋವಿಡ್ ಸಂದರ್ಭದಲ್ಲಿ ಬೆಡ್ ಸ್ಕ್ಯಾಮ್ ಮಾಡಿ ಟೂರ್ ಮಾಡಿದ್ದು, ಸರೀನಾ..? ಎಂದರು. ಕಳಪೆ ಕಾಮಗಾರಿ ಮಾಡಿ ಎರಡೆರಡು ಹೋಟೆಲ್ ಮಾಡ್ಕೊಂಡ್ರು
ನಾಲ್ಕೂವರೆ ವರ್ಷ ಹೋಟೆಲ್ನಲ್ಲಿ ಮಲಗಿ, ಆರು ತಿಂಗಳು ರೋಡ್ ರೋಡ್ ಸುತ್ತುತ್ತಿದ್ದಾರೆ, ಬಿಟಿಎಂ 2 ಸ್ಟೇಜ್ನಲ್ಲಿ ಜಮೀನು ಹೊಡೆದು 2 ಸಾವಿರ ಕೋಟಿ ದುಡ್ಡು ಮಾಡಿದ್ದಾರೆ, ನನ್ನನ್ನು ಟೂರಿಸ್ಟ್ ಅಭ್ಯರ್ಥಿ ಎಂದ್ರೆ ನ್ಯಾಯನಾ ನೀವೆ ಹೇಳಿ ಎಂದರು.ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ ವಾಗ್ದಾಳಿ