ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸೋಕೆ ಮುಂಚೆ ವಸಂತಪುರದ ವಸಂತ ವಲ್ಲಭ ದೇವಾಲಯ ಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ರು. ನೂರಾರು ಕಾರ್ಯಕರ್ತರು ಬೆಂಬಲಿಗರು, ಬೈಕ್ ಗಳಲ್ಲಿ ಆಗಮಿಸಿ ಆರ್ ಕೆ ರಮೇಶ್ ಪರವಾಗಿ ಜಯಘೋಷಗಳನ್ನ ಕೂಗಿದ್ರು. ಇನ್ನೂ ದೊಡ್ಡದಾದ ಸೇಬಿನಹಾರ ಹಾರವನ್ನು ಕ್ರೇನ್ ಮೂಲಕ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು. ನಂತರ ವಸಂತಪುರದಿಂದ ಬನಶಂಕರಿ ಮಾರ್ಗವಾಗಿ ತೆರಳಿದ್ರು ಇಲಿಯಾಜ್ ನಗರದ ನೂರಾನಿ ದರ್ಗಾಕ್ಕೆ ಭೇಟಿ ನೀಡಿದ್ರು ಇದೆ ಸಂಧರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳ ಆರ್ಶಿವಾರ್ದ ಪಡೆದು ಸಾಗಿಸಿದರು. ನಂತರ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿರುವ ಚುನಾವಣಾ ಧಿಕಾರಿಗೆ ನಾಮಪತ್ರ ಸಲ್ಲಿಸಿದ್ರು.ಕಳೆದ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನ ಪಡೆದಿದ್ದೆ ಈ ಬಾರಿ ಕ್ಷೇತ್ರದ ಮತದಾರರು ನನಗೆ ಮತಕೊಡುತ್ತಾರೆ.ನಮ್ಮ ಸಂಸದರಾದ ಡಿಕೆ ಸುರೇಶ್ ಅವರ ಜನಪರ ಯೋಜನೇಗಳನ್ನ ಮಾಡಿದ್ದಾರೆ ಜನಕ್ಕೆ ಅದು ಗೊತ್ತು ಅಲ್ಲದೆ ಸೋತ ನಂತರ ಕೂಡ ಕ್ಷೇತ್ರದ ಜನರೋಂದಿಗೆ ನಿರಂತರ ಒಡನಾಟಯಿಟ್ಟುಕೊಂಡಿದ್ದೇನೆ.ಕರೋನಾ ಟೈಂ ನಲ್ಲೂ ಕೂಡ ಜನರ ಪರವಾಗಿ ನಾನು ಹಗಲಿರುಳು ಕೆಲಸ ಮಾಡಿದ್ದೇನೆ. ಏನೇ ಆದರೂ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ. ವ್ಯಕ್ತಪಡಿಸಿದರು.