Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋಮು ಸೌಹಾರ್ದತೆ ಕೆಡಿಸಿದ್ರೆ ಹುಷಾರ್ ಎಂದ ಎಸ್ ಪಿ

ಕೋಮು ಸೌಹಾರ್ದತೆ ಕೆಡಿಸಿದ್ರೆ ಹುಷಾರ್ ಎಂದ ಎಸ್ ಪಿ
ಕಾರವಾರ , ಮಂಗಳವಾರ, 21 ಏಪ್ರಿಲ್ 2020 (15:11 IST)
ಕೋಮು ಸೌಹಾರ್ದತೆ ಕೆಡಿಸೋಕೆ ಮುಂದಾದರೆ ಹುಷಾರ್. ಹೀಗಂತ ಎಸ್ ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೋಮು ಸೌಹಾರ್ದತೆ ಕೆಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ನೀಡಿದ್ದಾರೆ.

ಕೊವಿಡ್- 19  ಸೋಂಕು ನಿವಾರಣೆಯು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ನಿರ್ಮೂಲನೆ ಸಾಧ್ಯವಾಗುತ್ತದೆ. ಒಂದೊಮ್ಮೆ ಜಾತಿ, ಧರ್ಮದ ಹೆಸರಿನಲ್ಲಿ ಕಿತ್ತಾಡಿದರೆ ಕೋವಿಡ್ ವಿರುದ್ಧದ ನಮ್ಮ ಹೋರಾಟ ವಿಫಲವಾಗಬಹುದು ಎಂದರು.

ಮುಸ್ಲಿಂ ಸಮುದಾಯದವರು ರಮಜಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯಿಂದ ಹಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಈ ಬಗ್ಗೆ ಮುಸ್ಲಿಂ ಸಮುದಾಯದ ಪ್ರಮುಖರೊಂದಿಗೂ ಮಾತುಕತೆ ಮಾಡಲಾಗಿದೆ ಎಂದರು.

ಲಾಕ್‌ಡೌನ್ ಉಲ್ಲಂಘನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಐಎಂವಿ ಪ್ರಕರಣ ದಾಖಲಿಸಿ 3,65,೦೦೦ ರೂ. ದಂಡ ವಸೂಲಿ ಮಾಡಲಾಗಿದೆ.  209 ವಾಹನಗಳನ್ನು ಸೀಜ್ ಮಾಡಲಾಗಿದ್ದು, 53 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾದರಾಯನಪುರದಲ್ಲಿ ಪೊಲೀಸರೊಂದಿಗೆ ಮತ್ತೆ ಗಲಾಟೆ, ಕಿರಿಕ್