Publish Date: Tue, 21 Apr 2020 (09:59 IST)
Updated Date: Tue, 21 Apr 2020 (10:01 IST)
ಬೆಂಗಳೂರು: ಇನ್ ಫೋಸಿಸ್ ಸಂಸ್ಥಾಪಕಿ, ಸಮಾಜ ಸೇವಕಿ ಸುಧಾಮೂರ್ತಿ ಕಷ್ಟ ಎಂದು ಬಂದವರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡಲ್ಲ. ಇದೀಗ ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೂ ಸುಧಾಮೂರ್ತಿ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ.
ಕೊರೋನಾದಿಂದಾಗಿ ಚಿತ್ರರಂಗದ ನೂರಾರು ಕಾರ್ಮಿಕರು ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿ ದಿನ ದೂಡುತ್ತಿದ್ದಾರೆ. ಇಂತಹ ಕಾರ್ಮಿಕರಿಗೆ ಸುಧಾಮೂರ್ತಿ ನೆರವಾಗಿದ್ದಾರೆ.
ಕಾರ್ಮಿಕ ಸಂಘದ ಮನವಿಗೆ ಸ್ಪಂದಿಸಿರುವ ಸುಧಾಮೂರ್ತಿ ಎಲ್ಲಾ ಕಾರ್ಮಿಕ ಸಂಘಟನೆಗಳ ಸದಸ್ಯರಿಗೆ ಸುಮಾರು 2000 ಅಗತ್ಯ ವಸ್ತುಗಳ ಕಿಟ್ ನೀಡಿದ್ದಾರೆ. ಅವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.