Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇಲ್ಲ

ಕೆಜಿಎಫ್ 2
ಬೆಂಗಳೂರು: ಕೊರೋನಾದಿಂದಾಗಿ ಚಿತ್ರರಂಗವೇ ಸ್ತಬ್ಧವಾಗಿ ಕುಳಿತಿದೆ. ಈ ಲಾಕ್ ಡೌನ್ ಇಫೆಕ್ಟ್ ಎಷ್ಟೋ ಚಿತ್ರಗಳ ರಿಲೀಸ್ ಮೇಲೆ ಪ್ರಭಾವ ಬೀರಲಿದೆ. ಕೆಜಿಎಫ್ 2 ಕೂಡಾ ಇದೇ ಕಾರಣಕ್ಕೆ ಲೇಟ್ ಆಗಬಹುದಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಅಕ್ಟೋಬರ್ ನಲ್ಲಿ ಈ ವರ್ಷದ ದಸರಾಗೆ ಕೆಜಿಎಫ್ 2 ಸಿನಿಮಾ ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ‍ಘೋಷಿಸಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಇದುವರೆಗೆ ಟೀಸರ್ ಕೂಡಾ ಹೊರಬಿಟ್ಟಿಲ್ಲ. ಚಿತ್ರದ ಕೆಲಸಗಳೂ ಬಾಕಿಯಿವೆ. ಹೀಗಾಗಿ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಬಹುದಾ ಎಂಬ ಅನುಮಾನ ಅಭಿಮಾನಿಗಳಿಗಿತ್ತು. ಇದಕ್ಕೀಗ ನಿರ್ಮಾಪಕ ಕಾರ್ತಿಕ್ ಗೌಡ ಉತ್ತರಿಸಿದ್ದಾರೆ.

ಇನ್ ಸ್ಟಾಗ್ರಾಂ ಚ್ಯಾಟ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ಕಾರ್ತಿಕ್ ಗೌಡ ಚಿತ್ರ ಬಿಡುಗಡೆ ದಿನಾಂಕ ಮುಂದೆ ಹೋಗಿಲ್ಲ. ನಿಗದಿಯಾದ ದಿನವೇ ಬಿಡುಗಡೆಯಾಗಲಿದೆ ಎಂದಿದ್ದಾರೆ. ಚಿತ್ರೀಕರಣ ಶೇ.80 ರಷ್ಟು ಪೂರ್ತಿಯಾಗಿದೆ. ಇನ್ನು 20 ಶೇಕಡಾ ಕೆಲಸಗಳಷ್ಟೇ ಬಾಕಿಯಿವೆ. ಲಾಕ್ ಡೌನ್ ಮುಗಿದ ಕೂಡಲೇ ಅದನ್ನು ಮಾಡಿ ಮುಗಿಸುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಿನಿಮಾ ನೋಡಿ ಮೆಚ್ಚಿಕೊಂಡ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್