Publish Date: Sun, 29 Sep 2019 (18:48 IST)
Updated Date: Sun, 29 Sep 2019 (18:50 IST)
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ವಿಚಾರಕ್ಕೆ ಪರ – ವಿರೋಧ ಹೇಳಿಕೆಗಳು ಹೊರಬೀಳುತ್ತಿವೆ.
ಈ ವಿಚಾದದಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿಗಳು ರಾಜಕೀಯ ಮಾಡ್ತಿವೆ. ಇದಕ್ಕೆ ಕಮ್ಯುನಲ್ ಬಣ್ಣ ಕಟ್ಟಿ ಜನತೆಗೆ ತಪ್ಪು ಸಂದೇಶ ರವಾನೆ ಮಾಡ್ತಿದ್ದಾರೆ. ಹೀಗಂತ ಮಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ್ ರಾವ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ತನ್ನ ಬದ್ಧತೆಯಿಂದ ದಿಟ್ಟ ಕ್ರಮ ಕೈಗೊಂಡಿತ್ತು. ಬೇರೆ ಬೇರೆ ಭಾಷೆ ಮಾತನಾಡುವ ರಾಜ್ಯಗಳಲ್ಲಿ 370 ವಿಧಿ ಇಲ್ಲದಿದ್ರೂ ಆರಾಮಾಗಿ ಜೀವನ ನಡೆಸ್ತಿದ್ದಾರೆ. ಎಲ್ಲೂ ಇಲ್ಲದ ರಿಸರ್ವೇಷನ್ ಅಲ್ಲಿ ಮಾತ್ರ ಯಾಕೆ..? ಬಿಜೆಪಿ ಎಂದೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದಿಲ್ಲ.
ಅದಕ್ಕೆ ವಿರುದ್ಧವಾಗಿ ನಡೆಯುವುದು ಅವರ ಚಾಳಿ ಎಂದು ತಿವಿದರು. ಎಲ್ಲದಕ್ಕೂ ವಿರೋಧ ಮಾಡುವುದು ಅವರ ರಕ್ತದಲ್ಲೇ ಬಂದು ಬಿಟ್ಟಿದೆ. ಹೀಗಂತ ಮಂಗಳೂರಲ್ಲಿ ಮುರುಳಿಧರ್ ರಾವ್ ಹೇಳಿಕೆ ನೀಡಿದ್ದಾರೆ.