Publish Date: Sun, 10 Nov 2019 (14:56 IST)
Updated Date: Sun, 10 Nov 2019 (14:58 IST)
ಕಪ್ಪು ಇಲ್ಲವೇ ನೀಲಿ ಬಣ್ಣದ ಇನ್ನೋವಾ ಕಾರಿನಲ್ಲಿ ನಿತ್ಯರಾತ್ರಿ ಬರೋ ಖದೀಮರು ಕಿಡ್ನಾಪ್ ಮಾಡುತ್ತಿದ್ದಾರೆ.
ಇನ್ನೋವಾ ಕಾರಿನಲ್ಲಿ ಬರೋ ಖದೀಮರು ಮಧ್ಯರಾತ್ರಿ ಸಂದರ್ಭದಲ್ಲಿ ರಸ್ತೆಯಲ್ಲಿರೋ ಜಾನುವಾರುಗಳನ್ನು ಕಿಡ್ನಾಪ್ ಮಾಡುತ್ತಿದ್ದಾರೆ.
ಉಡುಪಿ, ಕುಂದಾಪುರ ಸೇರಿದಂತೆ ಹಲವು ನಗರಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಹಲವೆಡೆ ಸಿಸಿಟಿವಿ ಫೂಟೇಜ್ ಗಳಲ್ಲಿ ಜಾನುವಾರು ಕಳ್ಳರ ಕೃತ್ಯ ಸೆರೆಯಾಗಿದೆ.
ಇನ್ನೋವಾ ಕಾರಿನಲ್ಲಿ ಹೈಟೆಕ್ ಆಗಿ ಬಂದು ರಸ್ತೆಯಲ್ಲಿರೋ ಜಾನುವಾರುಗಳನ್ನು ಕದಿಯುತ್ತಿರುವುದೇಕೆ? ಖದೀಮರನ್ನು ಪೊಲೀಸರು ಬಂಧನ ಮಾಡುತ್ತಿಲ್ಲ ಏಕೆ? ಎಂದೆಲ್ಲಾ ಜನರು ಪ್ರಶ್ನೆ ಮಾಡುತ್ತಿದ್ದಾರೆ.