Publish Date: Sun, 10 Nov 2019 (14:45 IST)
Updated Date: Sun, 10 Nov 2019 (14:48 IST)
ಖದೀಮನೊಬ್ಬ ಪೊಲೀಸರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.
ಶಿವಮೊಗ್ಗದ ಪೊಲೀಸರು, ಪೊಲೀಸರ 20ಕ್ಕೂ ಹೆಚ್ಚು ಮೊಬೈಲ್ ಗಳನ್ನು ಕಳ್ಳತನ ಮಾಡಿದ್ದ ಖಿಲಾಡಿ ಕಳ್ಳನನ್ನು ಬಂಧ ಮಾಡಿದ್ದಾರೆ.
ತಮಿಳುನಾಡಿನ ಕಾರ್ತಿಕ್ (33) ಬಂಧಿತ ಖದೀಮ ಕಳ್ಳನಾಗಿದ್ದಾನೆ.
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯ ಬಂದೋಬಸ್ತ್ ಗಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಭಾರತೀಯ ಸಮುದಾಯದ ಭವನದಲ್ಲಿ ರಾತ್ರಿ ನಿದ್ರೆ ಮಾಡುತ್ತಿದ್ದ ಪೊಲೀಸರ ಹತ್ತಿರದಲ್ಲಿ ಮೊಬೈಲ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು.