ಬೆಂಗಳೂರು : ಫೆ.27ರಂದು ಕಾವೇರಿ ನಿವಾಸಕ್ಕೆ ಸಿಎಂ ಬಿಎಸ್ ವೈ ಶಿಫ್ಟ್ ಆಗಲಿದ್ದು, ಹುಟ್ಟುಹಬ್ಬದಂದೇ ಅವರು ಅಧಿಕೃತ ನಿವಾಸದ ಗೃಹಪ್ರವೇಶ ಮಾಡಲಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಬಿಎಸ್ ವೈ ವಿಶೇಷ ಪೂಜೆ ಮಾಡಲಿದ್ದು, ಅಧಿಕೃತ ನಿವಾಸ ಕಾವೇರಿ ಗೃಹಪ್ರವೇಶ ಬಳಿಕವೇ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಸದ್ಯ ಡಾಲರ್ಸ್ ಕಾಲೋನಿ ನಿವಾಸದಲ್ಲೇ ಇರಲಿರುವ ಬಿಎಸ್ ವೈ, ಬಜೆಟ್ ಮಂಡನೆಗೂ ಮುನ್ನ ಸ್ವಚ್ಚತಾ ಕೆಲಸ ಮುಗಿದರೆ ಕಾವೇರಿ ನಿವಾಸದಿಂದ ತೆರಳಿ ಬಜೆಟ್ ಮಂಡಿಸಲಿದ್ದಾರೆ. ಇಲ್ಲವಾದ್ರೆ ಡಾಲರ್ಸ್ ಕಾಲೋನಿ ನಿವಾಸದಿಂದಲೇ ತೆರಳಿಬಜೆಟ್ ಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ.