ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿದ ಪರಿಣಾಮವಾಗಿ ಇಂದು ಪಂಜಾಬ್ ರಾಜ್ಯ ಮತ್ತಷ್ಟು ಸಾಲದ ಸುಳಿಗೆ ಸಿಲುಕಿದೆ. ಆಪ್ ಸರ್ಕಾರ ಅಧಿಕಾರಕ್ಕೆ ಏರುವಾಗಲೇ ಪಂಜಾಬ್ ದೇಶದ ಅತ್ಯಂತ ಸಾಲಗಾರ ರಾಜ್ಯ ಎನ್ನುವ ಕುಖ್ಯಾತಿ ಹೊಂದಿತ್ತು. ಅದಕ್ಕೆ ಬರೆ ಎನ್ನುವಂತೆ ಹೊಸ ಸರ್ಕಾರ ಆದಾಯ ಕ್ರೋಢಿಕರಣದ ಯೋಜನೆಗಳ ಹೊರತಾಗಿ ಬಿಟ್ಟಿಭಾಗ್ಯಗಳಿಗೆ ಹಣ ಸುರಿದ ಕಾರಣಕ್ಕೆ ಪಂಜಾಬ್ ರಾಜ್ಯದ ಸಾಲ ಮತ್ತಷ್ಟು ಶಿಖರಕ್ಕೇರಿದೆ. ಮಂಗಳವಾರ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ಗೆ ಪತ್ರ ಬರೆದಿರುವ ಸಿಎಂ ಭಗವಂತ್ ಸಿಂಗ್ ಮಾನ್, ರಾಜ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಧಾನಿ ಮೋದಿಗೆ ಮನವಿ ಮಾಡಿ ರಾಜ್ಯಕ್ಕೆ ಬರಬೇಕಾಗಿರುವ ಫಂಡ್ ರಿಲೀಸ್ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ.