Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಗರದಲ್ಲಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಮದನ್ (32) ಎಂಬಾತನನ್ನು ಕೊಲೆ ಮಾಡಲಾಗಿದೆ.ಬಾಣಸವಾಡಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು,ಹಳೆ ದ್ವೇಷದ ಹಿನ್ನಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಅಂಗಡಿಯೊಂದರ ಒಳಭಾಗದಲ್ಲಿದ್ದ ಮದನ್ ರನ್ನ ಆ ಸಂದರ್ಭದಲ್ಲಿ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ.ರಾಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ರಾಮಮೂರ್ತಿನಗರ ಪೊಲೀಸರಿಂದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.ಚೆನೈನಲ್ಲಿ ಮದನ್ ವಾಸವಾಗಿದ್ದ.ಹಲವು ದಿನಗಳ ಹಿಂದೆ ಹೃತ್ವಿಕ್ ಎಂಬಾತನ ಮೇಲೆ ಮದನ್ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿದ್ದ.ಹೀಗಾಗಿ ಹಳೆ ದ್ವೇಷದ ಹಿನ್ನಲೆ ಮದನ್ ನ್ನ ಆರೋಪಿಗಳು ಹತ್ಯೆ ಮಾಡಿದ್ದಾರೆ.ಮದನ್ ಬರುವಿಕೆಗಾಗಿ ಹಂತಕರು ಕಾದು ಕುಳಿತಿದ್ದರು.ಮದನ್ ಬರುತ್ತಿದ್ದಂತೆ ಮೂರು ಜನರು ಲಾಂಗ್ ಹಿಡಿದು ಅಟ್ಯಾಕ್ ಮಾಡಿದ್ದಾರೆ.ಅಟ್ಯಾಕ್‌ನಲ್ಲಿ ಮದನ್ ಕೈ ಯನ್ನು ಆರೋಪಿಗಳು ಕತ್ತರಿಸಿದ್ರು.ಗಾಯಗೊಂಡ ವ್ಯಕ್ತಿಯನ್ನ ಆಸ್ಪತ್ರೆಗೆ ಪೊಲೀಸರು ದಾಖಲಿಸಲು ಮುಂದಾದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮದನ್ ಸಾವನಾಪ್ಪಿದ್ದಾನೆ.