ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಸೈಟು ಹೊಡೆದ ಆರೋಪ

Krishnaveni K
ಶನಿವಾರ, 19 ಅಕ್ಟೋಬರ್ 2024 (14:00 IST)
ಮೈಸೂರು: ಮುಡಾ ಹಗರಣದ ಉರುಳು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಗೆ ಮತ್ತಷ್ಟು ಕಗ್ಗಂಟಾಗುತ್ತಿದೆ. ಇದೀಗ ಮತ್ತೊಂದು ಮುಡಾ ಸೈಟು ನುಂಗಿದ್ದಾರೆ ಎಂಬ ಆರೋಪ ಸಿದ್ದರಾಮಯ್ಯ ಪತ್ನಿ ವಿರುದ್ಧ ಕೇಳಿಬಂದಿದೆ.

ಆರ್ ಟಿಐ ಕಾರ್ಯಕರ್ತ ಗಂಗರಾಜು ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಮುಡಾಗೆ ಸೇರಿದ 7 ಗುಂಟೆ ಜಾಗವನ್ನು ಕಳೆದ ವರ್ಷ ಪಾರ್ವತಿ ಸಿದ್ದರಾಮಯ್ಯ ತಮ್ಮದೆಂದು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸೈಟು ಕೂಡಾ ಸಿಎಂ ಪತ್ನಿ ಹೆಸರಿನಲ್ಲಿದೆ.

ಮೈಸೂರಿನ ಕೆಆರ್ ಎಸ್ ರಸ್ತೆಯಲ್ಲಿರುವ 4 ಎಕರೆ 11 ಗುಂಟೆ ಜಾಗದ ಪೈಕಿ 20 ಗುಂಟೆ ಜಾಗವನ್ನು 1.85 ಕೋಟಿ ರೂ.ಗೆ ಸಿಎಂ ಪತ್ನಿ ಹೆಸರಿನಲ್ಲಿ ಖರೀದಿ ಮಾಡಲಾಗಿದೆ. ಈ ನಿವೇಶನದಲ್ಲಿ ಮೊದಲಿನ ಮಾಲಿಕರು 8998 ಚದರ ಅಡಿ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಟ್ಟಿದ್ದರು.

ಆದರೆ ಸಿಎಂ ಪತ್ನಿ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿಸುವಾಗ ಈ ಜಾಗವನ್ನೂ ಸೇರಿಸಿ ನೋಂದಣಿ ಮಾಡಲಾಗಿದೆ. ಮುಡಾಗೆ ಬಿಟ್ಟುಕೊಟ್ಟ ನಿವೇಶನವನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದು ಅಕ್ರಮವಾಗಿದ್ದು, ಸಿಎಂ ಪತ್ನಿ ವಿರುದ್ಧ ಈಗ ಮತ್ತೊಂದು ಆರೋಪ ಕೇಳಿಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಯಕ ಜುಬೀನ್ ಗಾರ್ಗ್‌ 13ನೇ ದಿನದ ಕಾರ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ

RSSನ ಸಮಾನಾರ್ಥ ಪದವೇ ದೇಶಭಕ್ತಿ: ಪ್ರಧಾನಿ ನರೇಂದ್ರ ಮೋದಿ

ನವೆಂಬರ್ ಕ್ರಾಂತಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ

ಜೈಲಿನಲ್ಲಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮೇಲೆ ಸಹಕೈದಿ ಹಲ್ಲೆ, ಕಾರಣ ಏನ್ ಗೊತ್ತಾ

ರಾಹುಲ್‌ಗೆ ಗುಂಡು ಹೊಡೆಯುತ್ತೇವೆಂದ ಬಿಜೆಪಿ ವಕ್ತಾರನ ಬೆದರಿಕೆಗೆ ಪ್ರಧಾನಿ ಮೌನದ ಅರ್ಥವೇನು: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments