ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ ಮುಡಾ ಹಗರಣದ ಬಿಸಿ ಬೆನ್ನಲ್ಲೇ ಸಿಎಂ ಪತ್ನಿ ಪಾರ್ವತಿ ಅವರು 14ಸೈಟ್‌ಗಳನ್ನು ವಾಪಸ್ ನೀಡಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎ ಸೈಟ್ ಅನ್ನು ವಾಪಸ್ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆಯ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, 14ಸೈಟು ವಾಪಾಸ್ ಕೊಡುತ್ತೇನೆ ನಾನು ನಿರಪರಾಧಿ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದೀಗ 5ಎಕರೆ ಸಿಎ ಸೈಟ್ ವಾಪಾಸ್ ಕೊಡುತ್ತೇನೆ ನಾನೂ ಕೂಡಾ ನಿರಪರಾಧಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಹೇಳುತ್ತಿದ್ದಾರೆ.
ಕಾಡುಗಳ್ಳ ವೀರಪ್ಪನ್ ಇಂದು ಬದುಕಿದ್ದರೆ, ಭ್ರಷ್ಟ ಕಾಂಗ್ರೆಸ್ಸಿಗರ ರೀತಿ ತಾನು ಸಹ ಆನೆ ದಂತ, ಗಂಧದ ಮರ ವಾಪಾಸ್ ನೀಡುತ್ತೇನೆ, ನನ್ನನ್ನು ನಿರಪರಾಧಿ ಎಂದು ಘೋಷಿಸಿ ಎನ್ನುತ್ತಿದ್ದ ಅಲ್ವಾ ಎಂದು ಕಾಂಗ್ರೆಸ್ ನಾಯಕರನ್ನು ವ್ಯಂಗ್ಯ ಮಾಡಿದ್ದಾರೆ.
ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ನಡೆಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.