ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯ ಇಂಗಳದಾಳು ಗ್ರಾಮ ಪಂಚಾಯಿತಿ ರಿ. ಸರ್ವೇ ನಂಬರ್ 44 ರಲ್ಲಿ 40 ಎಕೆರೆ ಗೋಮಾಳ ಜಮೀನಿದ್ದು, ಜಿಲ್ಲಾಡಳಿವು ಅಲ್ಲಿ ಜಿಲ್ಲಾಡಳಿತ ಭವನ ಕಟ್ಟಲು ಸದರಿ ಜಾಗವನ್ನು ಸಮತಟ್ಟು ಮಾಡಲು ಪಿ ಡಬ್ಲ್ಯೂ ಇಲಾಖೆಗೆ ಷರತ್ತು ಬದ್ದ ನಿಬಂಧನೆಗಳೊಂದಿಗೆ ಆದೇಶ ನೀಡಿತ್ತು. ಆದರೆ ಸದರಿ ಅದೇಶವನ್ನು ಪಿ ಡಬ್ಲ್ಯೂ ಇಲಾಖೆ ಅಧಿಕಾರಿಗಳು ಪಿಎನ್ ಸಿ ಕಂಪನಿಯೊಂದಿಗೆ ಶಾಮೀಲಾಗಿ ಆದೇಶ ಮಾರ್ಪಡಿಸಿದ್ದಾರೆ ಎಂದು ವಕೀಲರಾದ ಪ್ರತಾಪ್ ಜೋಗಿ ಆರೋಪಿಸಿದ್ದಾರೆ.
ಸರ್ಕಾರದ ಆದೇಶದಂತೆ ಜಿಲ್ಲಾಡಳಿತದ ಕಟ್ಟಡವನ್ನು ರೊ.ಸರ್ವೆ ನಂ: 44 ರಲ್ಲಿ 40 ಎಕರೆ ಜಾಗವಿದ್ದು,ಅದರಲ್ಲಿ ಕೇವಲ 10 ಎಕರೆ ಪ್ರದೇಶದಲ್ಲಿ ಮಾತ್ರ ಜಿಲ್ಲಾಡಳಿತ ಕಟ್ಟಡವನ್ನು ನಿರ್ಮಿಸಲು ಸೂಚಿಸಿದ್ದಾರೆ. ಆದರೆ ಪಿ ಡಬ್ಲ್ಯೂ ಇಲಾಖೆ ಮತ್ತು ಪಿಎನ್ ಸಿ ಕಂಪನಿಯವರ ಜೊತೆಗೂಡಿ ಸುಮಾರು 40 ಎಕರೆಯಲ್ಲೂ ಅಕ್ರಮವಾಗಿ ಕಾಮಗಾರಿಯನ್ನು ನಡೆಸಿದ್ದಾರೆ. ಭಾರೀ ಗಾತ್ರದ ವಾಹನಗಳನ್ನು ಬಳಸಿ ಚಿತ್ರದುರ್ಗ ಮತ್ತು ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗೆ ಅಲ್ಲಿರುವ ಯೋಗ್ಯವಾದ ಜಲ್ಲಿ, ಕಲ್ಲು ಮಣ್ಣನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಇದರಿಂದ ಗ್ರಾಮಸ್ಥರ ಜಮೀನಿನಲ್ಲಿ ರುವ ಬೆಳೆ ಹಾನಿ ಹಾಗೂ ಗ್ರಾಮಸ್ಥರಿಗೂ ಅಪಘಾತವಾಗಿದೆ. ಇದರ ಬಗ್ಗೆ ಕಂಪನಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಉಚ್ಚ ನ್ಯಾಯಾಲಯಕ್ಕೆ ದಾವೆ ಹೂಡಿದ್ದು, ಅರ್ಜಿಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿರುವ ಹೈ ಕೋರ್ಟ್ ಜಿಲ್ಲಾಧಿಕಾರಿ ಹಾಗೂ ಗಣಿಮತ್ತು ಭೂ ವಿಜ್ಞಾನ ಇಲಾಖೆಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಆದೇಶ ನೀಡಿದೆ