Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಕ್ಷದ ಹಿರಿಯ ಶಾಸಕನಿದ್ದೇನೆ ಸಚಿವ ಸ್ಥಾನ ಕೊಟ್ಟರೆ ರಾಜ್ಯದ ಹಾಗೂ ಜಿಲ್ಲೆ ಜನರ ಸೇವೆ ಮಾಡುತ್ತೆನೆ ಇಲ್ಲವಾದರೆ ಚಿತ್ರದುರ್ಗ ಕ್ಷೇತ್ರದ ಜನರ ಸೇವೆ ಮಾಡಿಕೊಂಡಿರುತ್ತೇನೆ ಎಂದು ಬಿಜೆಪಿ ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ನಾನು ಸುಮಾರು 58 ವರ್ಷಗಳಿಂದ ರಾಜಕಾರಣದಲ್ಲಿದ್ದೆನೆ. 28 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೆನೆ.ಸಚಿವ ಸ್ಥಾನ ನೀಡಿದರೆ ಉತ್ತಮ ಕೆಲಸ ಮಾಡುತ್ತೆನೆ. ಇನ್ನು ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಸಿಎಂ ಶಾಸಕಾಂಗ ಪಕ್ಷದ ಸಭೆಗೆ ನಾನು ಹೋಗುತ್ತೆನೆ. ಆದರೆ ಅದು ಶಾಸಕಾಂಗ ಪಕ್ಷದ ಸಭೆಯಲ್ಲ, ಯಡಿಯೂರಪ್ಪ ಅವರ ಎರಡು ವರ್ಷಗಳ ಅಧಿಕಾರವಧಿ ಪೂರ್ಣ ಗೊಳಿಸಿರುವ ಹಿನ್ನೆಲೆಯಲ್ಲಿ ನೀಡಲಿರುವ ಔತಣಕೂಟ ಎಂದು ಸಿಎಂ ಕಚೇರಿಯಿಂದ ಪತ್ರ ಬಂದಿದೆ. ನಾನು ಹೋಗುತ್ತೆನೆ ಎಂದು ಹೇಳಿದರು.