Publish Date: Tue, 31 Oct 2023 (16:45 IST)
Updated Date: Tue, 31 Oct 2023 (16:19 IST)
ಬಿಜೆಪಿ ತಂಡದಿಂದ ಬರ ಅಧ್ಯಯನ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಬರ ಅಧ್ಯಯನ ಮಾಡಲಿ ತಪ್ಪೇನಿಲ್ಲ.ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಲಿ.ನಮ್ಮ ಕೃಷಿ, ಕಂದಾಯ ಸಚಿವರು ವರದಿ ಕೊಟ್ಟಿದ್ದಾರೆ.ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ.ಅದರ ಪ್ರಕಾರ ದುಡ್ಡು ಕೊಡಿಸಲಿ.ಕೇಂದ್ರ ಸರ್ಕಾರ ಸ್ವಲ್ಪ ಲಿಬರಲ್ ಆಗಿದೆ.೨೦೦ ಕ್ಕೂ ಹೆಚ್ಚು ತಾಲೂಕು ಬರ ಎಂದು ಘೋಷಷಿಸಲಾಗಿದೆ.ಅವರದೇ ಆದಂತಹ ನಾರ್ಮ್ಸ್ ಇದೆ.ಅದರ ಪ್ರಕಾರವೇ ಅವರು ಮಾಡಿದ್ದಾರೆ.ಅದಕ್ಕೆ ಅವರು ಹಣ ಬಿಡುಗಡೆ ಮಾಡ್ತಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.
ಇನ್ನೂ ಮಹಾರಾಷ್ಟ್ರದಲ್ಲಿ ಬಸ್ಸಿಗೆ ಬೆಂಕಿ ಹಚ್ಚಿರುವ ವಿಚಾರವಾಗಿ ಅದು ಬಹಳ ತಪ್ಪು ಯಾರೇ ಆಗಲಿ ಮಾಡಬಾರದು.ನಮ್ಮ ರಾಜ್ಯದ ಹಿತ ಕಾಪಾಡಬೇಕು.ನಮ್ಮರಾಜ್ಯದ ಒಳಗಡೆ ರಕ್ಷಣೆ ಮಾಡಬೇಕು.ಏನು ಕ್ರಮ ಕೈಗೊಳ್ಳಬೇಕೋ ಅದನ್ನ ಮಾಡ್ತೇವೆ.ಸಿಎಂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.ಬಹಳ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.ಕೇಂದ್ರದಿಂದ ಬರ ಅಧ್ಯಯನ ಮಾಡಿದ ವಿಚಾರವಾಗಿ ಅದಕ್ಕೆ ಇವ್ರು ಹೋಗಿ ನೋಡಲಿ.ಕೇಂದ್ರ ಸರ್ಕಾರಕ್ಕೆ ವರದಿ ಮಾಡಲಿ.ಇವ್ರು ಹೋಗಿ ದುಡ್ಡು ಕೊಡಿಸಲಿ ಅಂತಾ ಮನವಿ ಮಾಡ್ತೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.