Publish Date: Tue, 31 Oct 2023 (10:47 IST)
Updated Date: Tue, 31 Oct 2023 (10:49 IST)
ಲಕ್ನೋ: ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಸಿದ ಉಪಯುಕ್ತ 87 ರನ್ ಗಳಿಂದ ಭಾರತ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.
ತಂಡ ಸಂಕಷ್ಟದಲ್ಲಿದ್ದಾಗ ರೋಹಿತ್ ತಮ್ಮ ಎಂದಿನ ಬಿರುಸಿನ ಆಟ ಕೈಬಿಟ್ಟು ಜವಾಬ್ಧಾರಿಯುತವಾಗಿ ಆಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದರು. ಆದರೆ ರೋಹಿತ್ ಈ ಪಂದ್ಯದಲ್ಲಿ ಕೈ ಬೆರಳಿಗೆ ಗಾಯವಾಗಿದ್ದರೂ ಆಡಿದರಾ? ಹೀಗೊಂದು ಅನುಮಾನ ಮೂಡಿದೆ.
ತಂಡದ ಜೊತೆಗೆ ರೋಹಿತ್ ಮುಂಬೈಗೆ ಪ್ರಯಾಣಿಸುವಾಗ ಅವರ ಕೈ ಬೆರಳಿಗೆ ಬ್ಯಾಂಡೇಜ್ ಹಾಕಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಈ ಪಂದ್ಯದಲ್ಲಿ ಕೈ ನೋವಿದ್ದರೂ ರೋಹಿತ್ ಬ್ಯಾಟಿಂಗ್ ಮಾಡಿದ್ದರು ಎನ್ನಲಾಗುತ್ತಿದೆ.